alex Certify BIG BREAKING: ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್, 24 ಗಂಟೆಯಲ್ಲಿ 19 ಸಾವಿರ ಜನರ ಸ್ಥಳಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್, 24 ಗಂಟೆಯಲ್ಲಿ 19 ಸಾವಿರ ಜನರ ಸ್ಥಳಾಂತರ

ಆಫ್ಘಾನಿಸ್ತಾನದಿಂದ ಇದುವರೆಗೆ 82,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದ್ದು, ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್  ಎಂದು ಹೇಳಲಾಗಿದೆ. ಇದುವರೆಗೆ 4500 ಅಮೆರಿಕದ ಕುಟುಂಬಗಳನ್ನು ಏರ್ಲಿಫ್ಟ್ ಮಾಡಲಾಗಿದೆ.

24 ಗಂಟೆಗಳಲ್ಲಿ 19,000 ಜನರನ್ನು 90 ವಿಮಾನಗಳಲ್ಲಿ ಏರ್ ಲಿಫ್ಟ್ ಮಾಡಲಾಗಿದೆ. ಇದು 1975 ರ ಸೈಗಾನ್ ಸ್ಥಳಾಂತರಿಸುವಿಕೆಯನ್ನು ಮೀರಿ ಇತಿಹಾಸದಲ್ಲಿ ಅತಿದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆಯಾಗಿದೆ ಎಂದು ಹೇಳಲಾಗಿದೆ.

ಸ್ಥಳಾಂತರಕ್ಕೆ ಅವಕಾಶ:

ಆಗಸ್ಟ್ 31 ರ ನಂತರವೂ ಆಫ್ಘಾನಿಸ್ಥಾನ ಬಿಟ್ಟುಹೋಗಲು ಅಮೆರಿಕ ಮತ್ತು ಮಿತ್ರ ಪಡೆಗಳು, ಇತರೆ ದೇಶಗಳ ನಾಗರಿಕರಿಗೆ ಅವಕಾಶ ಕಲ್ಪಿಸಲಾಗುವುದು.

ಆಫ್ಘಾನಿಸ್ತಾನದಿಂದ ಆಗಸ್ಟ್ 31 ರ ನಂತರವೂ ತೆರಳಲು ಅವಕಾಶ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಭರವಸೆ ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...