alex Certify ರಾಜ್ಯದ `ಕಾರ್ಮಿಕ’ರಿಗೆ ಮಹತ್ವದ ಮಾಹಿತಿ : ಇನ್ಮುಂದೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ `ಕಾರ್ಮಿಕ’ರಿಗೆ ಮಹತ್ವದ ಮಾಹಿತಿ : ಇನ್ಮುಂದೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರವು ಕಾರ್ಮಿಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಇನ್ಮುಂದೆ ಕಾರ್ಮಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಆಧಾ‌ರ್ ಸಂಖ್ಯೆಯನ್ನು ಗುರುತಿನ ದಾಖಲೆಯಾಗಿ ಬಳಸುವ ಮೂಲಕ ಸರ್ಕಾರದ ಸೇವೆಗಳು, ಸೌಲಭ್ಯಗಳು ಹಾಗೂ ಸಬ್ಸಿಡಿಗಳ ವಿತರಣೆ ಪ್ರಕ್ರಿಯೆಯು ಸರಳೀಕೃತವಾಗುತ್ತದೆ. ಆ  ಮೂಲಕ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿ, ಫಲಾನುಭವಿಗಳು ತಮ್ಮ ಅರ್ಹತೆಯ ಸೌಲಭ್ಯವನ್ನು ಸರಳವಾಗಿ ಹಾಗೂ ಯಾವುದೇ ಅಡೆತಡೆಯಿಲ್ಲದೆ ಪಡೆಯಲು ಅನುವಾಗುತ್ತದೆ. ಅಲ್ಲದೆ ತಮ್ಮ ಗುರುತನ್ನು ಖಚಿತ ಪಡಿಸಲು ಬಹುಸಂಖ್ಯೆಯ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆಯನ್ನು ತಡೆಯುತ್ತದೆ;

ಅದರಂತೆ, ಕಾರ್ಮಿಕ ಇಲಾಖೆಯು (ಇನ್ನು ಮುಂದೆ ಇಲಾಖೆ ಎಂದು ಉಲ್ಲೇಖಿಸಲಾಗುತ್ತದೆ) ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು (ಇನ್ನೂ ಮುಂದೆ ಯೋಜನೆ  ಎಂದು ಉಲ್ಲೇಖಿಸಲಾಗುತ್ತದೆ) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ. (ಇನ್ನು ಮುಂದೆ ಅನುಷ್ಠಾನ ಏಜೆನ್ಸಿ ಎಂದು ಉಲ್ಲೇಖಿಸಲಾಗುತ್ತದೆ);

ಅದರಂತೆ,  ಜಾರಿಯಲ್ಲಿರುವ ಯೋಜನಾ ಮಾರ್ಗಸೂಚಿಗಳನ್ವಯ ಅನುಷ್ಠಾನ ಏಜೆನ್ಸಿಯ ಮೂಲಕ ಸದರಿ ಯೋಜನೆಯಡಿ ನಗದನ್ನು (ಇನ್ನು ಮುಂದೆ ಸೌಲಭ್ಯ ಎಂದು ಉಲ್ಲೇಖಿಸಲಾಗುತ್ತದೆ) ಡೆಲವರಿ ವೃತ್ತಿಯಲ್ಲಿ ತೊಡಗಿರುವ ನೋಂದಾಯಿತ ಗಿಗ್ ಕಾರ್ಮಿಕರಿಗೆ ನೀಡಲಾಗುತ್ತಿದೆ. (ಇನ್ನು ಮುಂದೆ ಫಲಾನುಭವಿಗಳೆಂದು ಉಲ್ಲೇಖಿಸಲಾಗುತ್ತದೆ);

ಅದರಂತೆ,  ಯೋಜನೆಯು ಕರ್ನಾಟಕ ಸರ್ಕಾರದ ಸಂಚಿತ ನಿಧಿಯಿಂದ ಸೆಳೆಯಲಾದ ಆವರ್ತಕ ವೆಚ್ಚವನ್ನು ಒಳಗೊಂಡಿರುತ್ತದೆ;

ಪ್ರಸ್ತುತ, ಈ  ಕಾರಣಕ್ಕಾಗಿ, ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016 (18 ರ 2016) ಸೆಕ್ಷನ್ 7 ರ ಅನುಸಾರ (ಇನ್ನು ಮುಂದೆ ಉಲ್ಲೇಖಿತ ಕಾಯ್ದೆಎಂದು ಉಲ್ಲೇಖಿಸಲಾಗಿದೆ) ಕರ್ನಾಟಕ ಸರ್ಕಾರವು ಈ ಕೆಳಕಂಡಂತೆ ಅಧಿಸೂಚಿಸಿದೆ. ಅಂದರೆ:-

(1) ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಅಪೇಕ್ಷಿಸುವ ವ್ಯಕ್ತಿಯು ಈ ಮೂಲಕ ಆಧಾರ್‌ನ್ನು ಹೊಂದಿರುವ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ ಅಥವಾ ಆಧಾರ್ ದೃಡೀಕರಣಕ್ಕೆ ಒಳಗಾಗಬೇಕಾಗುತ್ತದೆ. ಆಧಾರ್ ಹೊಂದಿರುವ ಆಧಾರ್ ಮತ್ತು ಇತರ ವಿವರಗಳನ್ನು ಬಳಸಲು ಒಪ್ಪಿಗೆಯನ್ನು ಅನುಬಂಧ ದಲ್ಲಿ ನಿರ್ಧಿಷ್ಟಪಡಿಸಲಾಗಿದೆ.

(2) ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಬಯಸುವ ಯಾವುದೇ ವ್ಯಕ್ತಿಯು, ಆಧಾರ್ ನ್ನು ಹೊಂದಿಲ್ಲದೇ ಇದ್ದ ಪಕ್ಷದಲ್ಲಿ ಅಥವಾ ಇದುವರೆಗೆ ಆಧಾರ್‌ಗೆ ನೋಂದಣಿಯಾಗದೇ ಇದ್ದ ಪಕ್ಷದಲ್ಲಿ, ಆಧಾರ್ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ ಆಧಾರ್ ಪಡೆಯಲು ಅರ್ಹರಾಗಿದ್ದಲ್ಲಿ, ಆಧಾರ್ ಪಡೆಯಲು ಅರ್ಜಿ ಸಲ್ಲಿಸತಕ್ಕದ್ದು. ಒಂದು ವೇಳೆ ಫಲಾನುಭವಿಗಳು ಮಕ್ಕಳಾಗಿದ್ದಲ್ಲಿ, ತನ್ನ ತಂದೆ / ತಾಯಿ ಅಥವಾ ಪೋಷಕರ ಒಪ್ಪಿಗೆಗೆ ಒಳಪಟ್ಟು ಆಧಾ‌ರ್ ನೋಂದಣಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂತಹ  ಮಕ್ಕಳು / ವ್ಯಕ್ತಿಗಳು ಯಾವುದೇ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) www.uidai.gov.in ನಲ್ಲಿ ಪಟ್ಟಿ ಲಭ್ಯವಿದೆ) ಆಧಾರ್ ಗೆ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...