alex Certify ಇಲಿಯಾನಾ ಡಿ ಕ್ರೂಜ್ ರನ್ನೂ ಕಾಡಿದೆ ಹೆರಿಗೆ ನಂತ್ರದ ʼಖಿನ್ನತೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲಿಯಾನಾ ಡಿ ಕ್ರೂಜ್ ರನ್ನೂ ಕಾಡಿದೆ ಹೆರಿಗೆ ನಂತ್ರದ ʼಖಿನ್ನತೆʼ

ತಾಯಿಯಾಗುವ ಪ್ರತಿಯೊಬ್ಬ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಾಳೆ. ಗರ್ಭಧಾರಣೆ, ಹೆರಿಗೆ ಮಹಿಳೆಯ ಮರುಹುಟ್ಟು. ಈ ವೇಳೆ ಮಹಿಳೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಒಳಗಾಗ್ತಾಳೆ. ಹೆರಿಗೆ ನಂತ್ರ ಮಾನಸಿಕ ಖಿನ್ನತೆ ಅನೇಕರನ್ನು ಕಾಡುತ್ತದೆ. ಸಾಮಾನ್ಯ ಮಹಿಳೆಯರಿಗೆ ಮಾತ್ರವಲ್ಲ ಬಾಲಿವುಡ್‌ ಸ್ಟಾರ್ಸ್‌ ಸೇರಿದಂತೆ ಅನೇಕ ದಿಗ್ಗಜರು ಈ ಬಗ್ಗೆ ಮಾತನಾಡಿದ್ದಾರೆ. ಈಗ ಇಲಿಯಾನಾ ಡಿ ಕ್ರೂಜ್‌ ಕೂಡ ಈ ಸಮಸ್ಯೆ ಎದುರಿಸಿದ್ದಾರೆ. ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗ್ತಿಲ್ಲ ಎನ್ನುವ ನೋವು ಅವರನ್ನು ಕಾಡಿತ್ತಂತೆ. ಅವರ ಸಂಗಾತಿ ಬೆಂಬಲಕ್ಕೆ ನಿಂತ ಕಾರಣ ಈಗ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಹೆರಿಗೆ ನಂತ್ರ ಕಾಡುವ ಈ ಖಿನ್ನತೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಮತ್ತೆ ಕೆಲವರು ಇದನ್ನು ನಿರ್ಲಕ್ಷ್ಯ ಮಾಡ್ತಾರೆ.

ಹಠಾತ್ ನಿದ್ರೆಯ ಕೊರತೆ ಮತ್ತು ಮಗುವನ್ನು ನಿರಂತರವಾಗಿ ನೋಡಿಕೊಳ್ಳುವುದು ಮತ್ತು ಮನೆ ಕೆಲಸಗಳಂತಹ ಅನೇಕ ಜವಾಬ್ದಾರಿಗಳನ್ನು ಮಾಡುವುದು ತಾಯಿಯನ್ನು ತುಂಬಾ ಸುಸ್ತುಗೊಳಿಸುತ್ತದೆ. ಈ ಕಾರಣದಿಂದಾಗಿ ಮಹಿಳೆಯರು ದೈಹಿಕ ದೌರ್ಬಲ್ಯದಿಂದ ಬಳಲುತ್ತಾರೆ. ಹಾರ್ಮೋನ್‌ ಅಸಮತೋಲನ ಅವರನ್ನು ಖಿನ್ನತೆಗೆ ದೂಡುತ್ತದೆ.

ಹೆರಿಗೆ ನಂತ್ರ ಕಾಡುವ ಖಿನ್ನತೆ ಲಕ್ಷಣ : ನಿರಂತರವಾಗಿ ಕಾಡುವ ದುಃಖ ಮತ್ತು ನಿರಾಶೆ. ಹಸಿವಿನಲ್ಲಿ ಬದಲಾವಣೆ, ಮಗುವಿನೊಂದಿಗೆ ಹೊಂದಿಕೊಳ್ಳುವ ಸಮಸ್ಯೆ ಜೊತೆಗೆ ಕಾರಣವಿಲ್ಲದೆ ಅಳು ಹಾಗೂ ಕೋಪ ಈ ಖಿನ್ನತೆಯ ಮುಖ್ಯ ಲಕ್ಷಣವಾಗಿದೆ.

ಹೆರಿಗೆ ನಂತ್ರದ ಖಿನ್ನತೆಯಿಂದ ಹೊರ ಬರುವುದು ಹೇಗೆ ?

  • ಮನಸ್ಸು ಸರಿಯಿಲ್ಲ ಎಂದಾಗ ಕುಟುಂಬಸ್ಥರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು. ನಿಮ್ಮನ್ನು ಸಹಜ ಸ್ಥಿತಿಗೆ ತರಲು ಅವರ ಸಹಾಯ ಪಡೆಯಬೇಕು.
  • ವ್ಯಾಯಾಮ, ಧ್ಯಾನ, ಯೋಗ ಸೇರಿದಂತೆ ಸಣ್ಣ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಒಂಟಿಯಾಗಿ ಇರಬೇಡಿ. ‌
  • ಎಲ್ಲ ಜವಾಬ್ದಾರಿಯನ್ನು ನೀವು ಹಂಚಿಕೊಳ್ಳಬೇಕು. ಎಲ್ಲ ಕೆಲಸವನ್ನು ನೀವೊಬ್ಬರೇ ಮಾಡುವ ಬದಲು ಕುಟುಂಬಸ್ಥರಿಂದ ಸಹಾಯ ಪಡೆಯಿರಿ.
  • ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಗುವಿನ ಆರೈಕೆ ಮಾಡಿ. ನಿಮ್ಮನ್ನು ನೀವು ದೂಷಿಸಿಕೊಳ್ಳುತ್ತಿರಬೇಡಿ. ಬೇರೆಯವರ ಹೋಲಿಕೆ ಕೂಡ ಅಗತ್ಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...