alex Certify ಮಾರ್ಚ್ 1 ಕ್ಕೆ ʻದ್ವಿತೀಯ ಪಿಯುಸಿʼ, ಮಾ.25 ರಿಂದ ʻSSLCʼ ಪರೀಕ್ಷೆ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 1 ಕ್ಕೆ ʻದ್ವಿತೀಯ ಪಿಯುಸಿʼ, ಮಾ.25 ರಿಂದ ʻSSLCʼ ಪರೀಕ್ಷೆ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು : 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ನ್ನು ದಿನಾಂಕ: 25.03.2024 ರಿಂದ 06.04.2024ರವರೆಗೆ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆ-Iನ್ನು ದಿನಾಂಕ: 01.03.2024 ರಿಂದ 22.03.2024ರವರೆಗೆ ನಡೆಸಲು ತೀರ್ಮಾನಿಸಿ, ಅಂತಿಮ ವೇಳಾಪಟ್ಟಿಗಳನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಜಿಲ್ಲಾ ಉಪನಿರ್ದೇಶಕರು (ಆಡಳಿತ) ಮತ್ತು ಜಿಲ್ಲಾ ಉಪನಿರ್ದೇಶಕರು (ಪ.ಪೂ.ಶಿ)ರವರು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಅಂತಿಮ ವೇಳಾಪಟ್ಟಿಗಳನ್ನು ಮಂಡಲಿಯ ಜಾಲತಾಣ www.kseab.karnataka.gov.inದಿಂದ ಪಡೆದುಕೊಂಡು ತಮ್ಮ ಶಾಲಾ/ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ನೀಡುವಂತೆ ಕ್ರಮವಹಿಸಲು ತಿಳಿಸಿದೆ.

SSLC ಪರೀಕ್ಷೆ ವೇಳಾಪಟ್ಟಿ

  • ಮಾ.25 – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
  • ಮಾ.27 – ಸಮಾಜ ವಿಜ್ಞಾನ
  • ಮಾ.30-ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂ ಸ್ತಾನಿ ಸಂಗೀತ, ಕರ್ನಾಟಕ ಸಂಗೀತ
  • ಏ. 2 – ಗಣಿತ, ಸಮಾಜ ಶಾಸ್ತ್ರ
  • ಏ.3 – ವಿಶೇಷಚೇತನ ಮಕ್ಕಳಿಗೆ ಸಂಬಂಧಿಸಿದ ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್ ಸೈನ್ಸ್
  • ಏ.4 – ತೃತೀಯ ಭಾಷೆ-ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)
  • ಏ.6 – ದ್ವೀತಿಯ ಭಾಷೆ- ಇಂಗ್ಲೀಷ್, ಕನ್ನಡ

ದ್ವಿತೀಯ ಪಿಯುಸಿ ವೇಳಾಪಟ್ಟಿ

  • ಮಾ. 1 – ಕನ್ನಡ, ಅರೇಬಿಕ್ ಮಾ. 4 – ಗಣಿತ, ಶಿಕ್ಷಣ
  • ಮಾ. 5 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • ಮಾ. 6 – ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್, ಬ್ಯೂಟಿವೆಲ್‌ನೆಸ್‌
  •  ಮಾ. 7 – ಇತಿಹಾಸ, ಭೌತಶಾಸ್ತ್ರ
  • ಮಾ. 9-ಐಚ್ಛಿಕ ಕನ್ನಡ, ಲೆಕ್ಕ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
  • ಮಾ.11 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
  • ಮಾ. 13 – ಇಂಗ್ಲಿಷ್
  • ಮಾ.15 – ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
  • ಮಾ. 16 – ಅರ್ಥಶಾಸ್ತ್ರ
  •  ಮಾ. 18 – ಭೂಗೋಳಶಾಸ್ತ್ರ, ಜೀವಶಾಸ್ತ್ರ
  • ಮಾ. 20 – ಸಮಾಜ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
  • ಮಾ.21- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ‌
  • ಮಾ. 22 – ಹಿಂದಿ

 

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...