alex Certify ಐಎಫ್​ಎಸ್​ ಅಧಿಕಾರಿ ಮನೆಗೆ ಬಂದ ಅನಿರೀಕ್ಷಿತ ಅತಿಥಿ…! ಗುರುತಿಸಲು ಟಾಸ್ಕ್‌ ನೀಡಿ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಎಫ್​ಎಸ್​ ಅಧಿಕಾರಿ ಮನೆಗೆ ಬಂದ ಅನಿರೀಕ್ಷಿತ ಅತಿಥಿ…! ಗುರುತಿಸಲು ಟಾಸ್ಕ್‌ ನೀಡಿ ಟ್ವೀಟ್

ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಮಾರಣಾಂತಿಕ ಸರೀಸೃಪಗಳಲ್ಲಿ ಹಾವು ಕೂಡ ಒಂದು. ಎಲ್ಲಾ ಹಾವುಗಳು ಮಾರಣಾಂತಿಕ ಅಲ್ಲದಿದ್ದರೂ ಹಾವು ಎಂಬ ಹೆಸರು ಕೇಳಿದಾಕ್ಷಣ ಬೆಚ್ಚಿ ಬೀಳುವವರು ಇದ್ದಾರೆ. ‌

ಈ ಹಾವುಗಳಲ್ಲಿ ಒಂದು ಹಸಿರು ಹಾವು. ನೋಡಲು ಬಲು ಸುಂದರವಾಗಿದ್ದು, ನೋಡುಗರನ್ನು ಸೆಳೆಯುವ ಹಾವುಗಳಲ್ಲಿ ಹಸಿರು ಹಾವು ಕೂಡ ಒಂದು.

ಹಲವು ರೀತಿಯ ಹಸಿರು ಹಾವುಗಳಿದ್ದು, ಅವುಗಳಲ್ಲಿ ಒಂದನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಮನೆಯ ಸಮೀಪ ಬಂದಿರುವ ಈ ಹಾವಿನ ಚಿತ್ರವನ್ನು ಕ್ಲಿಕ್​ ಮಾಡಿ ಪೋಸ್ಟ್​ ಮಾಡಿರುವ ಅವರು, ಈ ಹಾವಿನ ಜಾತಿಯನ್ನು ಊಹಿಸಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ.

ವರದಿಯ ಪ್ರಕಾರ, ಐಎಫ್‌ಎಸ್ ಅಧಿಕಾರಿ ಹಂಚಿಕೊಂಡ ಚಿತ್ರದಲ್ಲಿ ತೋರಿಸಿರುವ ಹಾವಿನ ಜಾತಿಯು ಬಹುಶಃ ಟ್ರಿಮೆರೆಸುರಸ್ ಅಲ್ಬೋಲಾಬ್ರಿಸ್ ಆಗಿದೆ. ಹಾವಿನ ಬಗ್ಗೆ ಅರಿವಿದ್ದವರು ಈ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ. ಇದು ವೈಟ್​ ಲೀಪ್​ ಪಿಟ್ ವೈಪರ್ ಜಾತಿಗೆ ಸೇರಿದೆ. ಅನಿಮಾಲಿಯಾ ವೆಬ್‌ಸೈಟ್‌ನ ಪ್ರಕಾರ, ವೈಪರ್ ಹಾವಿನ ತಲೆಯ ಬದಿಯಲ್ಲಿ ಹಳದಿ, ಬಿಳಿ ಅಥವಾ ತೆಳು ಹಸಿರು ಬಣ್ಣದ ಮೇಲೆ ಹಸಿರು ಬಣ್ಣದ್ದಾಗಿದೆ. ಈ ಜಾತಿಗಳ ಹಾವುಗಳು ಸಾಮಾನ್ಯವಾಗಿ ಹಸಿರು ಬಣ್ಣದ್ದಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...