alex Certify ಈ ನಿರ್ಗತಿಕನದ್ದು 24-ಕ್ಯಾರೆಟ್ ಚಿನ್ನದ ಹೃದಯ: ಕಣ್ತುಂಬಿ ಬರುವ ಫೋಟೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಿರ್ಗತಿಕನದ್ದು 24-ಕ್ಯಾರೆಟ್ ಚಿನ್ನದ ಹೃದಯ: ಕಣ್ತುಂಬಿ ಬರುವ ಫೋಟೋ ವೈರಲ್​

ಈ ಆಧುನಿಕ ಪ್ರಪಂಚದ ವೇಗದಲ್ಲಿ, ಅನೇಕರು ಆಶ್ರಯಕ್ಕಾಗಿ ಹೋರಾಡುತ್ತಾರೆ, ಇತರರು ತಮ್ಮ ಹಸಿವನ್ನು ನೀಗಿಸಲು ಹೆಣಗಾಡುತ್ತಾರೆ. ಈ ಎಲ್ಲದರ ನಡುವೆ, ಮನೆಯಿಲ್ಲದ ವ್ಯಕ್ತಿಯೊಬ್ಬ ಬೀದಿ ನಾಯಿಗಳಿಗೆ ಆಶ್ರಯ ನೀಡಲು ಪ್ರಯತ್ನಿಸಿರುವ ದೃಶ್ಯವೊಂದು ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೃದಯಗಳನ್ನು ಕರಗಿಸುವಂತಿದೆ.

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ನಿರಾಶ್ರಿತ ವ್ಯಕ್ತಿಯ ನಿಸ್ವಾರ್ಥ ಸೇವೆಯ ಕುರಿತಾದ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ, ನಿರ್ಗತಿಕ ವ್ಯಕ್ತಿ ಅಂಗಡಿಯ ಶಟರ್ ಮುಂದೆ ಮಲಗಿರುವುದನ್ನು ಕಾಣಬಹುದು. ಈತ ತನ್ನ ಚಿಕ್ಕ ಹಾಸಿಗೆಯನ್ನು ಸರಿಸುಮಾರು ಏಳು ಬೀದಿನಾಯಿಗಳೊಂದಿಗೆ ಹಂಚಿಕೊಳ್ಳುವುದನ್ನು ಚಿತ್ರದಲ್ಲಿ ಕಾಣಬಹುದು. ನಾಯಿಗಳಿಗೆ ಮಳೆ ತಾಗದಿರಲಿ ಎನ್ನುವ ಕಾರಣಕ್ಕೆ ಅವುಗಳಿಗೆ ಛತ್ರಿಯನ್ನು ತೆರೆದಿರುತ್ತಾನೆ. ಇದು ಹೆಚ್ಚು ಹೃದಯಸ್ಪರ್ಶಿಯಾಗಿದೆ.

“ನಮ್ಮ ಹೃದಯವು ಈ ದೊಡ್ಡ ಪ್ರಪಂಚವನ್ನು ಸರಿಹೊಂದಿಸಲು ಸಾಕಷ್ಟು ದೊಡ್ಡದಾಗಿರಬೇಕು” ಎಂದು ಅಧಿಕಾರಿ ಶೀರ್ಷಿಕೆ ಕೊಟ್ಟಿದ್ದು, ಫೋಟೋ ನೋಡಿ ಕಣ್ತುಂಬಿ ಬರುವಂತಿದೆ. “ಈತನದ್ದು 24-ಕ್ಯಾರೆಟ್ ಚಿನ್ನದ ಹೃದಯ” ಎಂದು ಹಲವರು ಹೇಳಿದ್ದಾರೆ.

— Susanta Nanda (@susantananda3) November 20, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...