ಇಂದು ಮಾಘ ಹುಣ್ಣಿಮೆ. ಈ ದಿನ ಸತಿದೇವಿಯ ಜನ್ಮವಾಗಿದೆಯಂತೆ. ಹಾಗಾಗಿ ಇಂದು ಶಿವಪಾರ್ವತಿಯರ ಪೂಜೆ ಮಾಡಿ. ಈ ದಿನ ಮಂತ್ರವನ್ನು ಪಠಿಸಿ ಸಂಜೆಯ ವೇಳೆ ಈ ಕೆಲಸ ಮಾಡಿದರೆ ಮನೆಯಲ್ಲಿರುವ ಸಮಸ್ಯೆಗಳೆಲ್ಲಾ ತೊಲಗಿ ಮನೆಯಲ್ಲಿ ಏಳಿಗೆಯಾಗುತ್ತದೆ.
ನದಿಯಲ್ಲಿ ಸ್ನಾನ ಮಾಡಿ ಆ ವೇಳೆ “ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ, ನರ್ಮದೆ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಮಂತ್ರವನ್ನು ಹೇಳಿಕೊಂಡು ಸ್ನಾನ ಮಾಡಿ. ಹಾಗೇ ಇಂದು ಶಿವ ಪಾರ್ವತಿಯ ಫೋಟೊ ಇಟ್ಟು ಪೂಜೆ ಮಾಡಿ. ಸಂಜೆಯ ವೇಳೆಗೆ 5 ಮುತ್ತೈದೆಯರಿಗೆ ತಾಂಬೂಲವನ್ನು ನೀಡಿ, ಅವರ ಆಶೀರ್ವಾದ ಪಡೆಯಿರಿ. ಇದರಿಂದ ಶಿವ ಪಾರ್ವತಿಯ ಅನುಗ್ರಹ ದೊರೆಯುತ್ತದೆ. ಇದರಿಂದ ಗಂಡ ಹೆಂಡತಿಯ ಕಲಹ ನಿವಾರಣೆಯಾಗುತ್ತದೆ.
ಹಾಗೇ ಇಂದು ಸಂಜೆ ಹಾಲನ್ನು ಚಂದ್ರನ ಬೆಳಕಿಗೆ ಇಟ್ಟು ಬಳಿಕ ಆ ಹಾಲನ್ನು ಸೇವಿಸಿದರೆ ದೇಹದ ಆರೋಗ್ಯ ಹೆಚ್ಚಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗೇ ಪೂಜೆಯ ವೇಳೆ “ ಓಂ ಜಟಾಧರ ಶಿರೋರತ್ನಂ ಶ್ವೇತವರ್ಣಂ ನಿಶಾಕರಂ ಧ್ಯಾಯೇತ್ ಅಮೃತ ಸಂಭೂತಂ ಸರ್ವಕಾಮ ಫಲಪ್ರದಂ” ಈ ಮಂತ್ರವನ್ನು 21 ಬಾರಿ ಪಠಿಸಿದರೆ ಶಿವನ ಜೊತೆಗೆ ಚಂದ್ರನ ಅನುಗ್ರಹ ದೊರೆಯುತ್ತದೆ.