alex Certify ಕನಸಿನಲ್ಲಿ ಹಾವು ಕಾಣ್ತಿದ್ದರೆ ʼನಾಗರ ಪಂಚಮಿʼ ದಿನ ತಪ್ಪದೆ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನಲ್ಲಿ ಹಾವು ಕಾಣ್ತಿದ್ದರೆ ʼನಾಗರ ಪಂಚಮಿʼ ದಿನ ತಪ್ಪದೆ ಮಾಡಿ ಈ ಕೆಲಸ

ರಾತ್ರಿ ಬೀಳುವ ಕನಸಿಗೆ ಅನೇಕ ಕಾರಣವಿದೆ. ಇದು ಮನಸ್ಸು, ದಿನದಲ್ಲಿ ನಡೆಯುವ ಘಟನೆಗೆ ಸಂಬಂಧಿಸಿದ್ದಾಗಿರುತ್ತದೆ. ಕೆಲವೊಮ್ಮೆ ಒಂದೇ ಕನಸುಗಳು ಮತ್ತೆ ಮತ್ತೆ ಬರುತ್ತವೆ. ಅಂತಹ ಕನಸುಗಳಿಗೆ ವಿಶೇಷ ಅರ್ಥವಿದೆ. ಸ್ವಪ್ನ ಶಾಸ್ತ್ರದಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. ಅನೇಕ ಜನರ ಕನಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತದೆ. ಕನಸಿನಲ್ಲಿ ಕಾಣುವ ಹಾವು, ಭಯ ಹಾಗೂ ಚಿಂತೆಗೆ ಕಾರಣವಾಗುತ್ತದೆ.

ಕನಸಿನಲ್ಲಿ ಹಾವುಗಳು ಪದೇ ಪದೇ ಕಾಣಿಸಿಕೊಂಡ್ರೆ ಅದಕ್ಕೆ ಪರಿಹಾರವಿದೆ. 2 ಬೆಳ್ಳಿ ಹಾವುಗಳು ಹಾಗೂ ಸ್ವಸ್ತಿಕದಿಂದ ಪರಿಹಾರ ಸಿಗಲಿದೆ. ಬೆಳ್ಳಿಯ ಸರ್ಪಗಳನ್ನು ಒಂದು ತಟ್ಟೆಯಲ್ಲಿ ಮತ್ತು ಸ್ವಸ್ತಿಕನ್ನು ಇನ್ನೊಂದು ತಟ್ಟೆಯಲ್ಲಿ ಇರಿಸಿ ಅದನ್ನು ಪೂಜಿಸಬೇಕು. ಬೆಳ್ಳಿಯ ಸರ್ಪಗಳಿಗೆ ಹಸಿ ಹಾಲನ್ನು ಅರ್ಪಿಸಿ.  ಎರಡೂ ತಟ್ಟೆಗಳನ್ನು ಮುಂದೆ ಇಟ್ಟುಕೊಂಡು ‘ಓಂ ನಾಗೇಂದ್ರಹರಾಯೈ ನಮಃ’ ಎಂದು ಜಪಿಸಿ. ಇದರ ನಂತರ, ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಬೆಳ್ಳಿ ಹಾವುಗಳನ್ನು ಅರ್ಪಿಸಿ. ಅಲ್ಲದೆ ಸ್ವಸ್ತಿಕವನ್ನು ಕುತ್ತಿಗೆಗೆ ಧರಿಸಿ. ನಾಗ ಪಂಚಮಿಯ ದಿನದಂದು ಈ ಪರಿಹಾರವನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.

ಈ ಬಾರಿ ಆಗಸ್ಟ್ 21 ರಂದು ನಾಗ ಪಂಚಮಿಯ ಆಚರಿಸಲಾಗ್ತಿದೆ. ಈ ದಿನ ಈ ಮೇಲಿನ ಉಪಾಯ ಮಾಡಬೇಕು. ಚತುರ್ಥಿಯಂದು ಹಗಲಿನಲ್ಲಿ ಆಹಾರವನ್ನು ತೆಗೆದುಕೊಂಡು ಪಂಚಮಿಯಂದು ಇಡೀ ದಿನ ಉಪವಾಸವಿರಿ. ಪೂಜೆಗೆ ಹಾವಿನ ಫೋಟೋ ಅಥವಾ ವಿಗ್ರಹವನ್ನು ಬಳಸಿ. ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಿ. ಹಸಿ ಹಾಲಿನಲ್ಲಿ ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ನಾಗದೇವರಿಗೆ ಅರ್ಪಿಸಿ. ಆರತಿ ಮಾಡಿ. ಪ್ರಸಾದವನ್ನು ಸ್ವೀಕರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...