alex Certify ʼಶ್ರಾವಣ ಮಾಸʼದಲ್ಲಿ ಕಪಾಟಿನಲ್ಲಿ ಈ ವಸ್ತು ಇಟ್ಟರೆ ವೃದ್ಧಿಯಾಗಲಿದೆ ಆರ್ಥಿಕ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶ್ರಾವಣ ಮಾಸʼದಲ್ಲಿ ಕಪಾಟಿನಲ್ಲಿ ಈ ವಸ್ತು ಇಟ್ಟರೆ ವೃದ್ಧಿಯಾಗಲಿದೆ ಆರ್ಥಿಕ ಸ್ಥಿತಿ

ಶ್ರಾವಣ ಮಾಸ ಬಹಳ ವಿಶೇಷವಾದದ್ದು. ಶ್ರಾವಣ ಮಾಸದಲ್ಲಿ ಭೋಲೇನಾಥನ ಪೂಜೆ, ಆರಾಧನೆ ಜೋರಾಗಿ ನಡೆಯುತ್ತದೆ. ಭಾರತದಲ್ಲಿ ವಾಸ್ತು ಶಾಸ್ತ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ.

ಮನೆಯ ವಾಸ್ತು ಸರಿಯಿದ್ರೆ ಮನೆಯಲ್ಲಿ ಸುಖ-ಶಾಂತಿ ನಲೆಸಿರುತ್ತದೆ. ಅದೇ ರೀತಿ ವಾಸ್ತು ಸರಿಯಿಲ್ಲವೆಂದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ವಾಸ್ತು ಸರಿಯಿದ್ರೆ ಆರ್ಥಿಕ ವೃದ್ಧಿಯಾಗುತ್ತದೆ. ಶ್ರಾವಣ ಮಾಸದಲ್ಲಿ ಆರ್ಥಿಕ ವೃದ್ಧಿ ಉಪಾಯ ಇಲ್ಲಿದೆ ನೋಡಿ.

ಶ್ರಾವಣ ಮಾಸದಲ್ಲಿ ಶಿವನ ಫೋಟೋವನ್ನು ಮನೆಗೆ ತನ್ನಿ. ಮನೆಯಲ್ಲಿ ಶಿವನ ಫೋಟೋವನ್ನು ಹಾಕಬೇಕು. ಶಿವನ ಮುಖ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರುವಂತೆ ನೋಡಿಕೊಳ್ಳಿ. ಹೀಗೆ ಮಾಡಿದ್ರೆ ಶಿವನ ಕೃಪೆಗೆ ನಾವು ಪಾತ್ರರಾಗ್ತೇವೆ. ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಯೂರುತ್ತದೆ.

ಶ್ರಾವಣ ಮಾಸದಲ್ಲಿ ಲೋಹದಿಂದ ಮಾಡಿದ ತ್ರಿಶೂಲವನ್ನು ಕಪಾಟಿನಲ್ಲಿಡಬೇಕು ಎನ್ನಲಾಗುತ್ತದೆ. ಸಣ್ಣ ತ್ರಿಶೂಲ ಅಂಗಡಿಯಲ್ಲಿ ಸಿಗುತ್ತದೆ. ಅದನ್ನು ನೀವು ಮಾಡಿಸಲೂಬಹುದು. ಈ ಸಣ್ಣ ತ್ರಿಶೂಲ ಮನೆಯಲ್ಲಿದ್ದರೆ ಹಣದ ಹೊಳೆ ಹರಿಯುತ್ತದೆಯಂತೆ. ತ್ರಿಶೂಲವನ್ನು ಕಪಾಟಿನಲ್ಲಿ ಇಡುವ ಮೊದಲು ಶಿವಲಿಂಗದ ಬಳಿಯಿಟ್ಟು ಪೂಜೆ ಮಾಡಿ. ನಂತ್ರ ಹಣ, ಆಭರಣ  ಇಡುವ ಜಾಗದಲ್ಲಿ ತ್ರಿಶೂಲ ಇಡಿ. ಸಣ್ಣ ತ್ರಿಶೂಲದಲ್ಲಿ ಸಾಕಷ್ಟು ಶಕ್ತಿಯಿರುತ್ತದೆ.

ಶ್ರಾವಣ ಮಾಸದಲ್ಲಿ ಶಿವನಿಗೆ ಆರತಿಯನ್ನು ಅವಶ್ಯವಾಗಿ ಮಾಡಬೇಕು. ಆರತಿ ಮಾಡುವ ಮೊದಲು ದೇವರ ಮುಂದೆ ದೀಪ ಹಚ್ಚುವುದು ಸಾಮಾನ್ಯ. ಈಶ್ವರನ ಮುಂದೆ ಒಂದರ ಬದಲು ಎರಡು ದೀಪವನ್ನು ಹಚ್ಚಿ. ಆರತಿಯಾದ್ಮೇಲೆ ಒಂದು ದೀಪವನ್ನು ಈಶ್ವರನ ಮುಂದಿಡಿ. ಇನ್ನೊಂದು ದೀಪವನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮನೆಯ ಅಂಗಳದಲ್ಲಿಡಿ. ದುಷ್ಟ ಶಕ್ತಿ, ನಕಾರಾತ್ಮಕ ಶಕ್ತಿಯನ್ನು ಇದು ದೂರ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...