alex Certify ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸದಿದ್ದರೆ ಗರ್ಭಿಣಿ ಆರೋಗ್ಯಕ್ಕೆ ಉತ್ತಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸದಿದ್ದರೆ ಗರ್ಭಿಣಿ ಆರೋಗ್ಯಕ್ಕೆ ಉತ್ತಮ

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ್ಣ, ರಂಜಕ, ಮೆಗ್ನೀಶಿಯಂ, ಹಲವಾರು ವಿಟಮಿನ್ ಗಳನ್ನು ಒಳಗೊಂಡಿರುತ್ತದೆ. ಆದರೆ ಈ ಹಾಗಲಕಾಯಿಯನ್ನು ಗರ್ಭಿಣಿಯರು ಮಾತ್ರ ಸೇವಿಸಬಾರದು. ಇದಕ್ಕೆ ಕಾರಣ ಇಲ್ಲಿದೆ ನೋಡಿ.

*ಹಾಗಲಕಾಯಿಯಲ್ಲಿರುವ ಪೋಷಕಾಂಶ ದೇಹಕ್ಕೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳನ್ನು ನಾಶ ಮಾಡುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ಕಾಡಬಹುದು. ಇದನ್ನು ಗರ್ಭಿಣಿಯರು ಸೇವಿಸಿದರೆ ಮಗುವಿನ ಜೀವಕ್ಕೆ ಅಪಾಯ ಸಂಭವಿಸಬಹುದು.

*ಹಾಗಲಕಾಯಿಯಲ್ಲಿರುವ ಅಣುಗಳು ದೇಹ ಸೇರಿದಾಗ ವಿಷವಾಗಿ ಪರಿಣಮಿಸುತ್ತದೆ. ಇದನ್ನು ಗರ್ಭಿಣಿಯರು ಸೇವಿದರೆ ಕರುಳಿನ ನೋವು, ವಾಂತಿ, ದಣಿವು, ಸ್ನಾಯುವಿನ ಸೆಳೆತ, ವಾಕರಿಕೆ ಮತ್ತು ಲಾಲಾರಸದ ಅಧಿಕ ಉತ್ಪಾದನೆಗೆ ಕಾರಣವಾಗಬಹುದು.

*ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸಿದರೆ ಅದರ ಬೀಜಗಳು ಹೊಟ್ಟೆ ಸೇರಿದಾಗ ಅಜೀರ್ಣ, ಅತಿಸಾರ, ಹೊಟ್ಟೆ ನೋವು ಉಂಟಾಗುತ್ತದೆ.

* ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸಿದರೆ ಗರ್ಭಕೋಶ ಸಂಕುಚನಗೊಂಡು ರಕ್ತಸ್ರಾವವಾಗಬಹುದು. ಇದರಿಂದ ಗರ್ಭಪಾತ ಕೂಡ ಸಂಭವಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...