alex Certify ಒಟ್ಟಿಗಿದ್ದು ಕಿತ್ತಾಡುವ ಬದಲು ದೂರವಿರುವುದೇ ಉತ್ತಮವಲ್ಲವೇ..? ಬೇರ್ಪಟ್ಟ ದಂಪತಿಗೆ ʼಸುಪ್ರೀಂʼ ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಟ್ಟಿಗಿದ್ದು ಕಿತ್ತಾಡುವ ಬದಲು ದೂರವಿರುವುದೇ ಉತ್ತಮವಲ್ಲವೇ..? ಬೇರ್ಪಟ್ಟ ದಂಪತಿಗೆ ʼಸುಪ್ರೀಂʼ ಕಿವಿಮಾತು

1995ರಲ್ಲಿ ಮದುವೆಯಾಗಿ ಕೇವಲ ಐದಾರು ದಿನ ಮಾತ್ರ ದಾಂಪತ್ಯ ಜೀವನ ನಡೆಸಿದ್ದ ಜೋಡಿಗೆ ಸುಪ್ರೀಂ ಕೋರ್ಟ್​ ಒಟ್ಟಿಗೆ ಬದುಕಲು ಸಾಧ್ಯವಾಗದೇ ಹೋದಲ್ಲಿ ಒಬ್ಬರನ್ನೊಬ್ಬರು ಬಿಡುವುದೇ ಸೂಕ್ತ ಎಂದು ಕಿವಿಮಾತು ಹೇಳಿದೆ.

ನೀವು ಪ್ರ್ಯಾಕ್ಟಿಕಲ್​ ಆಗಿ ಜೀವನವನ್ನು ನೋಡಬೇಕು. ಸಂಪೂರ್ಣ ಜೀವನ ಕೋರ್ಟ್​ನಲ್ಲಿಯೇ ಕಿತ್ತಾಡುತ್ತಾ ಕಳೆದಿದ್ದೀರಿ. ನಿಮಗೆ 50 ವರ್ಷ ಹಾಗೂ ಪತಿಗೆ 55 ವರ್ಷ. ಜೀವನಮಾನ ಪೂರ್ತಿ ಕಿತ್ತಾಡುತ್ತಾ ಇರುವ ಬದಲು ದೂರ ಇರುವುದೇ ಸೂಕ್ತವಲ್ಲವೇ ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಹಾಗೂ ಎ.ಎಸ್​. ಬೋಪಣ್ಣ ನೇತೃತ್ವದ ಪೀಠ ಹೇಳಿದೆ.

ದಂಪತಿಗೆ ವಿಚ್ಛೇದನ ನೀಡಿದ್ದ ತ್ರಿಪುರ ಹೈಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ವಿಚ್ಚೇದನದ ವಿಚಾರದಲ್ಲಿ ಹೈಕೋರ್ಟ್ ನಿರ್ಧಾರ ತಪ್ಪಾಗಿದೆ. ಜೀವನಾಂಶಕ್ಕೆ ಇಲ್ಲಿ ಗೌರವ ನೀಡಲಾಗಿಲ್ಲ ಎಂಬುದು ಪತ್ನಿ ಪರ ವಕೀಲರ ವಾದವಾಗಿದೆ.

ಜೀವನಾಂಶದ ಕುರಿತಂತೆ ಪರಸ್ಪರ ನಿರ್ಧಾರ ತೆಗೆದುಕೊಳ್ಳುವಂತೆ ದಂಪತಿಗೆ ಸೂಚಿಸಿದ ಕೋರ್ಟ್ ಡಿಸೆಂಬರ್​ನಲ್ಲಿ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.

1995 ಜುಲೈ 13ರಂದು ಈ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಪತ್ನಿಯು ಐಎಎಸ್​ ಅಧಿಕಾರಿಯ ಪುತ್ರಿಯಾಗಿದ್ದು, ಶ್ರೀಮಂತ ಮನೆತನಕ್ಕೆ ಸೇರಿದವರಾಗಿದ್ದರು. ಪತಿಯು ಮನೆ ಅಳಿಯ ಆಗಿ ಇರಬೇಕು ಎಂಬುದು ಪತ್ನಿಯ ಆಸೆಯಾಗಿತ್ತು. ಆದರೆ ನಿರುದ್ಯೋಗಿ ಸಹೋದರ ಹಾಗೂ ವೃದ್ಧ ತಾಯಿಯನ್ನು ನಾನು ಹೇಗೆ ಬಿಟ್ಟು ಬರುವುದು ಎಂಬುದು ಪತಿಯ ವಾದವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...