alex Certify ATM ತಯಾರಿಸಲು ಸ್ಫೂರ್ತಿಯಾಯ್ತು ಚಾಕೋಲೆಟ್ ಮಶಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ತಯಾರಿಸಲು ಸ್ಫೂರ್ತಿಯಾಯ್ತು ಚಾಕೋಲೆಟ್ ಮಶಿನ್

ಬ್ಯಾಂಕ್ ನಲ್ಲಿ ಹಣಕ್ಕೆ ಕ್ಯೂ ನಿಲ್ಲುತ್ತಿದ್ದ ಜನರ ಕೆಲಸ ಎಟಿಎಂ ಬಂದ್ಮೇಲೆ ಸುಲಭವಾಗಿದೆ. ಎಟಿಎಂನಿಂದ ಆರಾಮವಾಗಿ ಹಣ ವಿತ್ ಡ್ರಾ ಮಾಡ್ತಿದ್ದಾರೆ.

ಎಟಿಎಂ ಶುರುವಾಗಿ ಎಷ್ಟೋ ವರ್ಷಗಳಾಗಿವೆ. ಆದ್ರೆ ಮೊದಲ ಬಾರಿ ಎಟಿಎಂ ಎಲ್ಲಿ ಶುರುವಾಯ್ತು ಎಂಬುದು ಅನೇಕರಿಗೆ ತಿಳಿದಿಲ್ಲ.

ಜೂನ್ 27, 1967ರಲ್ಲಿ  ಲಂಡನ್‌ನ ಎನ್‌ಫೀಲ್ಡ್ ನಲ್ಲಿ ವಿಶ್ವದ ಮೊದಲ ಎಟಿಎಂ ಯಂತ್ರವನ್ನು ಶುರು ಮಾಡಲಾಯ್ತು. ಮೊದಲ ಬ್ಯಾಂಕ್ ಬಾರ್ಕ್ಲೇಸ್, ಈ ಯಂತ್ರವನ್ನು ತನ್ನ ಶಾಖೆಯಲ್ಲಿ ಸ್ಥಾಪಿಸಿತು. ಇದನ್ನು ಜಾನ್ ಶೆಫರ್ಡ್ ಬ್ಯಾರನ್ ಮತ್ತು ಅವರ ತಂಡ ಜಂಟಿಯಾಗಿ ತಯಾರಿಸಿದೆ. ಮುದ್ರಣ ಯಂತ್ರದಲ್ಲಿ ಕೆಲಸ ಮಾಡ್ತಿದ್ದ ಜಾನ್ ಶೆಫರ್ಡ್, ಸ್ವಯಂಚಾಲಿತ ನಗದು ಸಿಸ್ಟಮ್ ಯಂತ್ರವನ್ನು ಸಿದ್ಧಪಡಿಸಿದ್ದರು. ಜಾನ್ ಶೆಫರ್ಡ್ ಗೂ ಭಾರತಕ್ಕೂ ನಂಟಿದೆ. ಜಾನ್ ಶೆಫರ್ಡ್ ಮೇಘಾಲಯದ ಶಿಲ್ಲಾಂಗ್‌ನಲ್ಲಿ 1925 ರಲ್ಲಿ ಜನಿಸಿದರು.

ತಲೆತಿರುಗಿಸುತ್ತೆ ಈ ರೈಲ್ವೆ ನಿಲ್ದಾಣದ ಪಾರ್ಕಿಂಗ್​ ಶುಲ್ಕ…..!

ಚಾಕೊಲೆಟ್ ವೆಂಡಿಂಗ್ ಮೆಷಿನ್‌ನಿಂದ ಎಟಿಎಂ ಮಾಡಲು ಅವರಿಗೆ ಸ್ಫೂರ್ತಿ ನೀಡಿತ್ತಂತೆ. ಚಾಕೋಲೇಟ್ ಯಂತ್ರ ನೋಡಿ, ಎಟಿಎಂ ಮಶಿನ್ ಸಿದ್ಧವಾಯ್ತಂತೆ. ಎಟಿಎಂ ಅನ್ನು ಎನಿ ಟೈಮ್ ಮೆಷಿನ್ ಎಂದು ಕೆಲವರು ಹೇಳುತ್ತಾರೆ. ಆದರೆ ಕೆಲವರು ಅದನ್ನು ಸ್ವಯಂಚಾಲಿತ ಟೈಮ್ ಮೆಷಿನ್ ಎಂದು ಹೇಳುತ್ತಾರೆ. ಆದ್ರೆ ಎಟಿಎಂನ ನಿಜವಾದ ಹೆಸರು ಸ್ವಯಂಚಾಲಿತ ಟೆಲ್ಲರ್ ಮೆಷಿನ್.

ಇದು ನಮ್ಮ ದೇಶಕ್ಕೆ 1987 ರ ಸಮೀಪ ಬಂತು. ಹಾಂಗ್ ಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಷನ್ ಲಿಮಿಟೆಡ್ ನ ಮುಂಬೈ ಶಾಖೆಯಲ್ಲಿ ಮೊದಲ ಬಾರಿಗೆ ಎಟಿಎಂ ಪ್ರಾರಂಭಿಸಲಾಯಿತು. ಆದರೆ, ಸಾಮಾನ್ಯ ಜನರನ್ನು ತಲುಪಲು ಸುಮಾರು 20 ವರ್ಷಗಳು ಬೇಕಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...