alex Certify ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ LGBT ಧ್ವಜ ಹಿಡಿದು ಗಮನಸೆಳೆದ ದ್ಯುತಿ ಚಂದ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ LGBT ಧ್ವಜ ಹಿಡಿದು ಗಮನಸೆಳೆದ ದ್ಯುತಿ ಚಂದ್​

ಕಾಮನ್​ ವೆಲ್ತ್​ ಕ್ರೀಡಾಕೂಟ ಆರಂಭವಾಗಿದ್ದು, ಭಾರತ ಪದಕ ಬೇಟೆ ನಡೆಸಿದೆ. ಈ ನಡುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಪ್ರತಿಭೆ ವಿಶೇಷ ಕಾರಣಕ್ಕೆ ಗಮನ ಸೆಳೆದಿದೆ.

ಹೋಮೋಫೋಬಿಯಾ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸುವ ಮೂಲಕ ಸಂಚಲನ ಮೂಡಿಸಿದ್ದ ಭಾರತದ ಮೊದಲ ಸಲಿಂಗಕಾಮಿ ಅಥ್ಲೀಟ್​ ಆಗಿರುವ ದ್ಯುತಿ ಚಂದ್​, ಬರ್ಮಿಂಗ್​ ಹ್ಯಾಮ್​ನಲ್ಲಿ 2022 ರ ಕಾಮನ್​ವೆಲ್ತ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಎಲ್​ಜಿಬಿಟಿ (ಲೆಸ್ಬಿಯನ್, ಗೇ, ದ್ವಿಲಿಂಗಿ ಮತ್ತು ಟ್ರಾನ್ಸ್ಜೆಂಡರ್) ಧ್ವಜವನ್ನು ಹಿಡಿದಿದ್ದರು. ಆಕೆಯೊಂದಿಗೆ ಇತರ ಆರು ಕ್ರೀಡಾಪಟುಗಳು ಮತ್ತು ಕಾರ್ಯಕರ್ತರು ಇದ್ದರು.

ಬ್ರಿಟಿಷ್​ ಡೈವರ್​ ಟಾಮ್​ ಡೇಲಿ ಅವರು ಧ್ವಜವನ್ನು ಹಿಡಿದ ವಿವಿಧ ದೇಶಗಳ ಏಳು ಎಲ್​.ಜಿ.ಬಿ.ಟಿ. ಕ್ರೀಡಾಪಟುಗಳು ಮತ್ತು ಕಾರ್ಯಕರ್ತರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅರ್ಧದಷ್ಟು ಕಾಮನ್​ವೆಲ್ತ್​ ದೇಶಗಳಲ್ಲಿ ಸಲಿಂಗಕಾಮವು ಇನ್ನೂ ಅಪರಾಧವಾಗಿದೆ, ಕೆಲವು ಕಡೆ ಗರಿಷ್ಠ ಶಿಕ್ಷೆ ಮರಣದಂಡನೆಯಾಗಿದೆ ಎಂಬುದನ್ನು ಅವರು ಪೋಸ್ಟ್​ನಲ್ಲಿ ದಾಖಲಿಸಿದ್ದಾರೆ.

ನಮಗಾಗಿ ಈ ಉದ್ಘಾಟನಾ ಸಮಾರಂಭವು ವೀಕ್ಷಿಸುತ್ತಿರುವ ಶತಕೋಟಿ ಜನರಿಗೆ ಎಲ್.​ಜಿ.ಬಿ.ಟಿ. ಪ್ರಸ್ತುತತೆಯನ್ನು ತೋರಿಸುವ ಪ್ರಯತ್ನದ ಬಗ್ಗೆ ತಿಳಿಸಿರುವ ಅವರು ತನ್ನೊಂದಿಗೆ ಧ್ವಜ ಹಿಡಿದಿದ್ದ ಇತರ ಆರು ಮಂದಿಗೆ ಜೈಕಾರ ಹಾಕಿದರು.

ದ್ಯುತಿ ಚಂದ್​ ಭಾರತದ ರಾಷ್ಟ್ರೀಯ ತಂಡದ ಮೊದಲ ಸಲಿಂಗಕಾಮಿ ಕ್ರೀಡಾಪಟು. ಅವರು 2019 ರಲ್ಲಿ ತಮ್ಮ ಲೈಂಗಿಕತೆಯನ್ನು ಬಹಿರಂಗಪಡಿಸಿದ್ದರು ಮತ್ತು ಅಂದಿನಿಂದ ಎಲ್.​ಜಿ.ಬಿ.ಟಿ. ಸಮುದಾಯದ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದ್ದಾರೆ.

ಈ ವರ್ಷ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​ ಕ್ರೀಡಾಕೂಟವು ಜುಲೈ 28 ರಂದು ಪ್ರಾರಂಭವಾಗಿದ್ದು ಆಗಸ್ಟ್​ 8ರವರೆಗೆ ಮುಂದುವರಿಯುತ್ತದೆ. 15 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುವ 205 ಸದಸ್ಯರ ಬೃಹತ್​ ತಂಡ ಅಲ್ಲಿ ಪಾಲ್ಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...