alex Certify ಕ್ರೀಡಾಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 2028‌ ರ ಒಲಂಪಿಕ್ಸ್ ​​ನಲ್ಲಿ ಕ್ರಿಕೆಟ್ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 2028‌ ರ ಒಲಂಪಿಕ್ಸ್ ​​ನಲ್ಲಿ ಕ್ರಿಕೆಟ್ ಸೇರ್ಪಡೆ

2028ರಲ್ಲಿ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್​ನ್ನು ಸೇರ್ಪಡೆ ಮಾಡಲು ಬಿಡ್​ ಮಾಡಿರೋದಾಗಿ ಐಸಿಸಿ ಹೇಳಿದೆ. ಈ ಮೂಲಕ ಒಲಿಂಪಿಕ್ಸ್​​ ನಲ್ಲಿ ಕ್ರಿಕೆಟ್​​ನ್ನು ಸೇರ್ಪಡೆ ಮಾಡಲು ಮೊದಲ ಹೆಜ್ಜೆ ಇಡಲು ಮುಂದಾಗಿದೆ. 1900ರಲ್ಲಿ ನಡೆದ ಒಲಂಪಿಕ್​ ಪಂದ್ಯಾವಳಿಯಲ್ಲಿ ಮಾತ್ರ ಕ್ರಿಕೆಟ್​ ಆಟವನ್ನು ಸೇರ್ಪಡೆ ಮಾಡಲಾಗಿತ್ತು. ಇದರಲ್ಲಿ ಗ್ರೇಟ್​ ಬ್ರಿಟನ್​ ಚಿನ್ನದ ಪದಕವನ್ನು ಸಂಪಾದಿಸಿತ್ತು.

ಈ ವಿಚಾರವಾಗಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, 2028ರ ಲಾಸ್ ​ಏಂಜಲೀಸ್​ ಒಲಂಪಿಕ್ ​ನಲ್ಲಿ ಕ್ರಿಕೆಟ್​ ಸೇರ್ಪಡೆ ಮಾಡಿದಲ್ಲಿ ಟೀಂ ಇಂಡಿಯಾ ಕೂಡ ಸ್ಪರ್ಧೆಗೆ ಇಳಿಯಲಿದೆ ಎಂದು ಹೇಳಿದ್ರು. ಈ ಮೊದಲು ಬಿಸಿಸಿಐ ಒಲಂಪಿಕ್​ನಲ್ಲಿ ಸೇರ್ಪಡೆಯಾಗಲು ಮನಸ್ಸು ಮಾಡಿರಲಿಲ್ಲ. ಆದರೆ ಜಯ್​ ಶಾ ಅಧಿಕಾರ ವಹಿಸಿಕೊಂಡಾಗಿನಿಂದ ಈ ನಿಲುವು ಬದಲಾಗಿದೆ.

ಐಸಿಸಿ ಈಗಾಗಲೇ ವರ್ಕಿಂಗ್ ಗ್ರೂಪ್​ನ್ನು ರಚನೆ ಮಾಡಿದೆ. ಇದು 2028ರಿಂದ ಆರಂಭವಾಗಲಿರುವ ಒಲಂಪಿಕ್ ​​​ನ ಪರವಾಗಿ ಕೆಲಸ ಮಾಡಲಿದೆ. ಇಂಗ್ಲೆಂಡ್​ ಹಾಗೂ ವೇಲ್ಸ್​ ಕ್ರಿಕೆಟ್​ ಬೋರ್ಡ್​ ಮುಖ್ಯಸ್ಥ ಇಯಾನ್​ ವಾಟ್ಮೋರ್​​​​ ಐಸಿಸಿ ಒಲಂಪಿಕ್​ ವರ್ಕಿಂಗ್​​ ಗ್ರೂಪ್​​ನ್ನು ಮುನ್ನಡೆಸಲಿದ್ದಾರೆ. ಐಸಿಸಿ ಸ್ವತಂತ್ರ ನಿರ್ದೇಶಕ ಇಂದ್ರ ನೂಯಿ, ಜಿಂಬಾಬ್ವೆ ಕ್ರಿಕೆಟ್​ ಮುಖ್ಯಸ್ಥ ತವೆಂಗ್ವಾ ಮುಕುಹ್ಲಾನಿ, ಐಸಿಸಿ ಅಸೋಸಿಯೇಟ್​ ಸದಸ್ಯ ನಿರ್ದೇಶಕ ಮಹಿಂದಾ ವಲ್ಲಿಪುರಂ ಈ ಗ್ರೂಪ್​ನಲ್ಲಿ ಇದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಐಸಿಸಿ ಚೇರ್​ಮನ್​ ಗ್ರೇಗ್​ ಬಾಕ್ರ್ಲೆ, ಈ ಬಿಡ್​ನ ಹಿಂದೆ ಕ್ರಿಕೆಟ್​ ಕುಟುಂಬ ಒಗ್ಗಟ್ಟಾಗಿದೆ, ನಾವು ಒಲಂಪಿಕ್​​ ನಲ್ಲಿ ಕ್ರಿಕೆಟ್​​ನ ಭವಿಷ್ಯವನ್ನು ನೋಡುತ್ತಿದ್ದೇವೆ. ಕ್ರಿಕೆಟ್​ ಜಾಗತಿಕವಾಗಿ ಶತಕೋಟಿ ಅಧಿಕ ಅಭಿಮಾನಿಗಳನ್ನು ಹೊಂದಿದೆ. ಜಗತ್ತಿನಲ್ಲಿ 90 ಪ್ರತಿಶತ ಜನರು ಒಲಂಪಿಕ್ ​ನಲ್ಲಿ ಕ್ರಿಕೆಟ್​​ನ್ನು ನೋಡಬಯಸುತ್ತಾರೆ. ಕ್ರಿಕೆಟ್​​ ಭಾವನಾತ್ಮಕ ಅಭಿಮಾನಿಗಳನ್ನು ಹೊಂದಿದೆ. ದಕ್ಷಿಣ ಏಷಿಯಾದಲ್ಲಿ 92 ಪ್ರತಿಶತ ಮಂದಿ ಕ್ರಿಕೆಟ್​ ಅಭಿಮಾನಿಗಳೇ ಆಗಿದ್ದಾರೆ. ಅಮೆರಿಕದಲ್ಲಿ 30 ಮಿಲಿಯನ್​ ಕ್ರಿಕೆಟ್​ ಅಭಿಮಾನಿಗಳಿದ್ದಾರೆ. ಇವರೆಲ್ಲರೂ ಒಲಂಪಿಕ್ ನಲ್ಲಿ ಕ್ರಿಕೆಟ್​ನ್ನು ನೋಡಬಯಸುತ್ತಾರೆ ಎಂದು ಹೇಳಿದ್ದಾರೆ.

ಒಲಂಪಿಕ್​​ ನಲ್ಲಿ ಕ್ರಿಕೆಟ್​ ಸೇರ್ಪಡೆ ಮಾಡುವುದು ಉತ್ತಮ ನಿರ್ಧಾರವಾಗಿದೆ ಎಂದು ನಾವು ನಂಬಿದ್ದೇವೆ. ಆದರೆ ಇದೇ ರೀತಿ ಅನೇಕ ಕ್ರೀಡೆಗಳು ಸಹ ಇದೇ ಬಯಕೆಯನ್ನು ಹೊಂದಿರೋದ್ರಿಂದ ಈ ದಾರಿ ಸುಲಭವಾದುದಲ್ಲ ಎಂಬುದು ನಮಗೂ ತಿಳಿದಿದೆ. ಆದರೆ ಕ್ರಿಕೆಟ್​ನ್ನು ಒಲಂಪಿಕ್ ​ಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಮುನ್ನಡಿ ಇಡಲು ಇದು ಸೂಕ್ತ ಸಮಯವಾಗಿದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...