alex Certify ಕ್ರಿಕೆಟ್‌: ಫಾಲೋ-ಆನ್‌ ಮತ್ತು ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಮಾರ್ಪಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್‌: ಫಾಲೋ-ಆನ್‌ ಮತ್ತು ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಮಾರ್ಪಾಡು

ವಿಸ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಫಾಲೋ ಆನ್‌ ನಿಯಮದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅಂತರಾಷ್ಟ್ಟೀಯ ಕ್ರಿಕೆಟ್ ಸಮಿತಿ (ಐಸಿಸಿ), ಪಂದ್ಯದ ಮೊದಲನೇ ದಿನದ ಆಟ ಮಳೆಯಿಂದಾಗಿ ರದ್ದಾದರೂ ಸಹ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಆಗುವುದಿಲ್ಲ ಎಂದಿದೆ.

ಜೂನ್ 18-23ರ ನಡುವೆ ಆರು ದಿನಗಳ ಅವಧಿಗೆ ಈ ಸೂಪರ್‌ ಟೆಸ್ಟ್ ಪಂದ್ಯ ನಡೆಯಲಿದೆ. ಸೌಥಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಈ ಪಂದ್ಯ ನಡೆಯಲಿದೆ.

ಆಟದ ಮೇಲಿನ ಐಸಿಸಿ ನಿಯಮಾವಳಿಯ ಕ್ಲಾಸ್‌ 14ರ 14.1.1 ರ ಪ್ರಕಾರ: ಸದರಿ ಚಾಲ್ತಿಯಲ್ಲಿರುವ ಟೆಸ್ಟ್‌ ಪಂದ್ಯಗಳಲ್ಲಿ; ಮೊದಲು ಬ್ಯಾಟ್ ಮಾಡಿದ ತಂಡವೇನಾದರೂ ಮೊದಲ ಇನಿಂಗ್ಸ್‌ನಲ್ಲಿ ಕನಿಷ್ಠ 200 ರನ್‌ಗಳ ಮುನ್ನಡೆ ಪಡೆದಲ್ಲಿ, ಎದುರಾಳಿ ತಂಡವು ಇನ್ನು ಎರಡನೇ ಇನಿಂಗ್ಸ್‌ ಅನ್ನು ಫಾಲೋ ಆನ್ ಮಾಡಲು ಕೋರಬಹುದಾಗಿದೆ.

ಇದೇ ಕ್ಲಾಸ್‌ನ ಸಬ್‌‌ಕ್ಲಾಸ್‌ 14.1.2ರ ಪ್ರಕಾರ: 3-4 ದಿನಗಳ ಪಂದ್ಯವಾದಲ್ಲಿ ಇದೇ ಆಯ್ಕೆಯನ್ನು ಕನಿಷ್ಠ 150ರನ್ ಮೊದಲ ಇನಿಂಗ್ಸ್‌ ಮುನ್ನಡೆ; 2 ದಿನಗಳ ಪಂದ್ಯವಾದಲ್ಲಿ ಕನಿಷ್ಠ 100 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ; ಒಂದು ದಿನದ ಪಂದ್ಯವಾದಲ್ಲಿ 75 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದ ತಂಡ ಪಡೆದುಕೊಳ್ಳಲಿದೆ.

ಕ್ಲಾಸ್ 14.3ರ ಪ್ರಕಾರ: ಒಂದು ವೇಳೆ ಮೊದಲ ಹಾಗೂ ಎರಡನೇ ದಿನದಲ್ಲಿ ಆಟ ನಡೆಯದೇ ಇದ್ದಲ್ಲಿ, ಇನ್ನುಳಿದ ದಿನಗಳನ್ನು (ಮೀಸಲು ದಿನವನ್ನೂ ಸೇರಿಸಿ) ಲೆಕ್ಕ ಹಾಕಿಕೊಂಡು ಫಾಲೋ-ಆನ್‌ ಲೆಕ್ಕಾಚಾರ ಮಾಡಲಾಗುವುದು.

ಆದರೆ ವಿಶ್ಚ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ಇಟ್ಟಿರುವ ಕಾರಣದಿಂದ ಮೊದಲ ಎರಡು ದಿನಗಳ ಆಟ ರದ್ದಾದಲ್ಲಿ ಮಾತ್ರವೇ ಮೊದಲ ಇನಿಂಗ್ಸ್‌ನಲ್ಲಿ ಕನಿಷ್ಠ 200ರನ್‌ ಮುನ್ನಡೆಯ ಮಿತಿಯನ್ನು ಇಳಿಸಿ 150 ರನ್‌ಗಳ ಮುನ್ನಡೆಗೆ ಫಾಲೋ ಆನ್ ಲಾಭವನ್ನು ಮೊದಲು ಬ್ಯಾಟ್ ಮಾಡಿದ ತಂಡ ಪಡೆಯಲಿದೆ ಎಂದು ಐಸಿಸಿ, ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳಿಗೆ ತಿಳಿಸಿದೆ.

ಸಾಮಾನ್ಯ ಟೆಸ್ಟ್ ಪಂದ್ಯಗಳು 5 ದಿನಗಳು ಮಾತ್ರ ನಡೆಯುವ ಕಾರಣ ಮೊದಲ ದಿನದಾಟ ರದ್ದಾದಲ್ಲಿ ಫಾಲೋ ಆನ್ ನಿಯಮದಲ್ಲಿ ಪರಿಷ್ಕರಣೆ ಆಗುತ್ತದೆ. ಆದರೆ ಈ ಪಂದ್ಯಕ್ಕೆ ಮೀಸಲು ದಿನವನ್ನೂ ಕೊಟ್ಟಿರುವ ಕಾರಣ ಒಂದು ದಿನದಾಟ ರದ್ದಾದರೂ ಸಹ ಅದು 5-ದಿನದ ಪಂದ್ಯವಾಗೇ ಇರಲಿರುವ ಕಾರಣ ಫಾಲೋ-ಆನ್‌ ಮಿತಿಯಲ್ಲಿ ವಿನಾಯಿತಿ ಕೊಟ್ಟಿಲ್ಲ.

ಅಂಪೈರ್‌‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರದಲ್ಲೂ ಸಹ ಮಹತ್ವದ ಬದಲಾವಣೆ ತರಲಾಗಿದೆ. ಎಲ್‌ಬಿಡಬ್ಲ್ಯೂ ತೀರ್ಪುಗಳನ್ನು ಕೊಡುವ ವೇಳೆ ಬ್ಯಾಟ್ಸ್‌ಮನ್ ಶಾಟ್‌ ಆಡುವ ಯತ್ನ ಮಾಡಿದ್ದರೇ ಎಂದು ನಿರ್ಧರಿಸುವ ವಿಚಾರವಾಗಿ ಮೈದಾನದ ಅಂಪೈರ್‌ಗಳನ್ನು ಒಮ್ಮೆ ಕೇಳಿ ನೋಡುವ ಆಯ್ಕೆಯನ್ನು ಔಟ್‌ ಆದ ಬ್ಯಾಟ್ಸ್‌ಮನ್ ಹಾಗೂ ಫೀಲ್ಡಿಂಗ್ ತಂಡದ ನಾಯಕರಿಗೆ ಕೊಡಲಾಗಿದೆ. ಈ ಆಯ್ಕೆಯನ್ನು ಆಟಗಾರರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಮುನ್ನ ಬಳಸಿಕೊಳ್ಳಬಹುದಾಗಿದೆ.

ಈ ಹಿಂದೆ ಹೀಗೆ ಅಂಪೈರ್‌ಗಳನ್ನು ಇದೇ ವಿಚಾರವಾಗಿ ಕೇಳಿ ನೋಡುವ ಆಯ್ಕೆ ಇಲ್ಲದೇ ಇದ್ದ ಕಾರಣದಿಂದ ಬ್ಯಾಟ್ಸ್‌ಮನ್ ಹಾಗೂ ಫೀಲ್ಡಿಂಗ್ ತಂಡಕ್ಕೆ ಅನ್ಯಾಯವಾಗಿ ಒಂದನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇದ್ದವು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...