alex Certify ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: IBPS ನೇಮಕಾತಿ ಅಧಿಸೂಚನೆ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: IBPS ನೇಮಕಾತಿ ಅಧಿಸೂಚನೆ ಪ್ರಕಟ

ಇನ್‌ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) ಸೋಮವಾರ ಗ್ರೂಪ್ A ಆಫೀಸರ್ಸ್(ಸ್ಕೇಲ್-I, II ಮತ್ತು III) ಮತ್ತು ಗ್ರೂಪ್ B ಕಚೇರಿ ಸಹಾಯಕ(ವಿವಿಧೋದ್ದೇಶ) ಪೋಸ್ಟ್‌ ಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ.

ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ ನ ಅಧಿಕೃತ ವೆಬ್‌ ಸೈಟ್ ibps.in ಮೂಲಕ ಪೋಸ್ಟ್‌ ಗಳಿಗೆ ಅರ್ಜಿ ಸಲ್ಲಿಸಬಹುದು. ನೋಂದಣಿ ಜೂನ್ 7 ರಿಂದ ಆರಂಭವಾಗಲಿದೆ. ಜೂನ್ 27 ಕೊನೆ ದಿನವಾಗಿದೆ.

ನೇಮಕಾತಿ ಪ್ರಮುಖ ದಿನಾಂಕಗಳು

ಆನ್‌ ಲೈನ್ ನೋಂದಣಿ ಮತ್ತು ಅರ್ಜಿ ಶುಲ್ಕ/ಇಂಟಿಮೇಶನ್ ಶುಲ್ಕಗಳ ಪಾವತಿ: ಜೂನ್ 7 ರಿಂದ 27

ಪೂರ್ವ-ಪರೀಕ್ಷಾ ತರಬೇತಿ(PET): ಜುಲೈ 18 ರಿಂದ 23

ಪೂರ್ವಭಾವಿ ಆನ್‌ ಲೈನ್ ಪರೀಕ್ಷೆ: ಆಗಸ್ಟ್, 2022

ಪೂರ್ವಭಾವಿ ಆನ್‌ ಲೈನ್ ಪರೀಕ್ಷೆಯ ಫಲಿತಾಂಶ ಪ್ರಕಟ: ಸೆಪ್ಟೆಂಬರ್ 2022

ಆನ್‌ ಲೈನ್ ಮುಖ್ಯ ಪರೀಕ್ಷೆ: ಸೆಪ್ಟೆಂಬರ್/ಅಕ್ಟೋಬರ್

ಆಯ್ಕೆ ಪ್ರಕ್ರಿಯೆ

ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದೇ ಪ್ರಕ್ರಿಯೆಯ ಅಡಿಯಲ್ಲಿ ಗ್ರೂಪ್ A ಅಧಿಕಾರಿಗಳ(ಸ್ಕೇಲ್-I, II ಮತ್ತು III) ನೇಮಕಾತಿಗಾಗಿ ನೋಡಲ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಗಳು, ನಬಾರ್ಡ್ ಮತ್ತು IBPS ಸಹಾಯದಿಂದ ಸೂಕ್ತ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ನವೆಂಬರ್ ತಿಂಗಳಿನಲ್ಲಿ ಸಂದರ್ಶನಗಳನ್ನು ಆಯೋಜಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...