alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್​ ಸಿಬ್ಬಂದಿ ಆಯ್ಕೆ ಸಂಸ್ಥೆಯು ಗ್ರಾಮೀಣ ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗೆ ibps.in ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಐಬಿಪಿಎಸ್​​ ಜೂನ್​ 28ರವರೆಗೆ ಅವಕಾಶ ನೀಡಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಾಥಮಿಕ, ಮುಖ್ಯ ಪರೀಕ್ಷೆ ಹಾಗೂ ಕೊನೆಯಲ್ಲಿ ಸಂದರ್ಶನ ಇರಲಿದೆ. ಕಚೇರಿ ಸಹಾಯಕ ಹಾಗೂ ಆಫೀಸರ್​ ಸ್ಕೇಲ್​ 1, 2 ಹಾಗೂ 3ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್​ ತಿಂಗಳಲ್ಲಿ ಪ್ರಾಥಮಿಕ ಹಂತದ ಪರೀಕ್ಷೆ ನಡೆಯಲಿದೆ. ಆಗಸ್ಟ್​ 1ನೇ ತಾರೀಖು ಪರೀಕ್ಷೆ ನಡೆಯುತ್ತೆ ಎಂದು ಈ ಹಿಂದೆ ಐಬಿಪಿಎಸ್​ ಹೇಳಿತ್ತು. ಆದರೆ ಪರಿಷ್ಕೃತ ದಿನಾಂಕವನ್ನ ಐಬಿಪಿಎಸ್​ ಇನ್ನೂ ಪ್ರಕಟಿಸಿಲ್ಲ.

ಡಿಗ್ರಿ ಪದವೀಧರರು, ಎಂಬಿಎ ಹಾಗೂ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಅರ್ಹತೆ ಹೊಂದಿರೋದು ಅನಿವಾರ್ಯವಾಗಿದೆ:

ಅಭ್ಯರ್ಥಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಹಾಗೂ 30 ವರ್ಷಕ್ಕಿಂತ ಕೆಳಗಿನವರಾಗಿರಬೇಕು. ಆಫೀಸರ್​ 1, 2 ಹಾಗೂ 3ಕ್ಕೆ 32 ಹಾಗೂ 40 ವರ್ಷದ ಮಿತಿಯನ್ನ ನಿಗದಿಪಡಿಸಲಾಗಿದೆ.

ಪ್ರಾಥಮಿಕ ಹಂತದ ಪರೀಕ್ಷೆ : ಆಗಸ್ಟ್ 2021

ಪ್ರಾಥಮಿಕ ಹಂತದ ಪರೀಕ್ಷೆ ಫಲಿತಾಂಶ : ಸೆಪ್ಟೆಂಬರ್​ 2021

ಮುಖ್ಯ ಪರೀಕ್ಷೆ : ಸೆಪ್ಟೆಂಬರ್ /ಅಕ್ಟೋಬರ್​ 2021

ಸಂದರ್ಶನ : ಅಕ್ಟೋಬರ್​/ನವೆಂಬರ್​ 2021

ಎಸ್​​/ ಎಸ್ಟಿ ಹಾಗೂ ಪಿಡಬ್ಲುಬಿಡಿ ಅಭ್ಯರ್ಥಿಗಳಿಗೆ 175 ರೂಪಾಯಿ ಹಾಗೂ ಉಳಿದವರಿಗೆ 850 ರೂಪಾಯಿ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...