alex Certify BIG UPDATE : ‘ನನ್ನ ಬಳಿ ಇರೋದು ಒರಿಜಿನಲ್ ಹುಲಿ ಉಗುರು’ : ತಪ್ಪೊಪ್ಪಿಕೊಂಡ ವರ್ತೂರು ಸಂತೋಷ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG UPDATE : ‘ನನ್ನ ಬಳಿ ಇರೋದು ಒರಿಜಿನಲ್ ಹುಲಿ ಉಗುರು’ : ತಪ್ಪೊಪ್ಪಿಕೊಂಡ ವರ್ತೂರು ಸಂತೋಷ್..!

ಬೆಂಗಳೂರು : ನನ್ನ ಬಳಿ ಇರೋದು ಒರಿಜಿನಲ್ ಹುಲಿ ಉಗುರು ಎಂದು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಮನೆಯಿಂದಲೇ ಬಂಧಿಸಿ ಕರೆದುಕೊಂಡು ಬಂದಿರುವ ವರ್ತೂರ್ ಸಂತೋಷ್ ಹಲವು ಮಾಹಿತಿಗಳನ್ನು ಅರಣ್ಯ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ನನ್ನ ಬಳಿ ಇರೋದು ಒರಿಜಿನಲ್ ಹುಲಿ ಉಗುರು, ಇದನ್ನು ನಾನು ದುಡ್ಡು ಕೊಟ್ಟು ಖರೀದಿಸಿದ್ದೇನೆ ಎಂದು ವರ್ತೂರು ಸಂತೋಷ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸಂತೋಷ್ ಅವರು ಯಾರಿಂದ ಹುಲಿ ಉಗುರು ಪಡೆದುಕೊಂಡರು ಎಂಬ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಇದು ನಾನ್ ಬೇಲ್ ಬೆಲ್ ಕೇಸ್ ಆಗಿರುವುದರಿಂದ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರುಪಡಿಸಲಿದ್ದಾರೆ. ಅಲ್ಲದೇ ಹುಲಿ ಉಗುರನ್ನು ಲ್ಯಾಬ್ ಗೆ ಕೊಂಡೊಯ್ದು ಪರಿಶೀಲನೆ ನಡೆಸಲಿದ್ದಾರೆ. ಅವರ ಬಳಿ ಇರುವುದು ಒರಿಜನ್ ಹುಲಿ ಉಗುರು ಎಂದು ಕೋರ್ಟ್ ನಲ್ಲಿ ಸಾಬೀತು ಆದರೆ, ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಇತಿಹಾಸದಲ್ಲೇ ಇದೇ ಮೊದಲು ಕನ್ನಡದ ಬಿಗ್ ಬಾಸ್ ಸೀಜನ್-10ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಇತಿಹಾಸದಲ್ಲೇ ಇದೇ ಮೊದಲು ಕನ್ನಡದ ಬಿಗ್ ಬಾಸ್ ಸೀಜನ್-10ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...