alex Certify ಮತ್ತೊಂದು ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’ ಸ್ಪರ್ಧಿ : ‘ವರ್ತೂರು ಸಂತೋಷ್’ ಮದುವೆಯ ಫೋಟೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’ ಸ್ಪರ್ಧಿ : ‘ವರ್ತೂರು ಸಂತೋಷ್’ ಮದುವೆಯ ಫೋಟೋ ವೈರಲ್..!

ಬೆಂಗಳೂರು : ಹುಲಿ ಉಗುರು ಪ್ರಕರಣದ ನಂತರ ಬಿಗ್ ಬಾಸ್ ಸ್ಪರ್ಧಿ ‘ವರ್ತೂರು ಸಂತೋಷ್’ ಮದುವೆಯ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು. ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ‘ಹಳ್ಳಿಕಾರ್ ಒಡೆಯ’ ಎಂದೇ ಫೇಮಸ್ ಆದ ವರ್ತೂರು ಸಂತೋಷ್ ಮದುವೆಯ ಫೋಟೋ, ವಿಡಿಯೋ ವೈರಲ್ ಆಗಿದೆ. ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 27 ವರ್ಷದ ವರ್ತೂರ್ ಸಂತೋಷ್ ಈಗಾಗಲೆ ಮದುವೆ ಮಾಡಿಕೊಂಡಿದ್ದಾರೆ ಎಂದು ಹುಡುಗಿ ಜೊತೆಗಿರುವ ಫೋಟೋ ಟ್ರೋಲ್ ಪೇಜ್   ಗಳಲ್ಲಿ ವೈರಲ್ ಆಗುತ್ತಿದೆ.

ನೆಟ್ಟಿಗರೊಬ್ಬರು ‘ ಸಂತೋಷ್ ಮದುವೆಯ ಫೋಟೋ ಹಾಕಿ ಇದಪ್ಪಾ ಟ್ವಿಸ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇದಕ್ಕೆ ವರ್ತೂರು ಸಂತೋಷ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.

ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದಲೇ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಈ ಮೂಲಕ ವರ್ತೂರು ಸಂತೋಷ್ ಬಹಳ ಸುದ್ದಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...