alex Certify ಬಡ ʼಡೆಲಿವರಿ ಬಾಯ್‌ʼ ಗಾಗಿ ಮಿಡಿಯಿತು ನೆಟ್ಟಿಗರ ಹೃದಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ʼಡೆಲಿವರಿ ಬಾಯ್‌ʼ ಗಾಗಿ ಮಿಡಿಯಿತು ನೆಟ್ಟಿಗರ ಹೃದಯ

ಹೈದರಾಬಾದ್​ನ ಕಿಂಗ್​ ಕೋಟಿ ನಿವಾಸಿಯಾಗಿದ್ದ ರಾಬಿನ್​ ಮುಕೇಶ್​ ಎಂಬವರು ಸೋಮವಾರ ರಾತ್ರಿ ಜೊಮ್ಯಾಟೋದಲ್ಲಿ ಆರ್ಡರ್​ ಒಂದನ್ನ ಮಾಡಿದ್ದಾರೆ. ಅವರು ಆರ್ಡರ್​ ಮಾಡಿದ 20 ನಿಮಿಷಗಳಲ್ಲೇ ಆಹಾರ ಅವರ ಕೈ ಸೇರಿತ್ತು. ಆಶ್ಚರ್ಯಕರ ವಿಚಾರ ಅಂದರೆ ಈ ಆರ್ಡರ್​ ಡೆಲಿವರಿ ಮಾಡಿದ್ದ ಯುವಕನ ಬಳಿ ಇದ್ದದ್ದು ಬೈಸಿಕಲ್​..!

ಅಂದರೆ ಆತ ಕೇವಲ 20 ನಿಮಿಷಗಳಲ್ಲಿ ಬರೋಬ್ಬರಿ 9 ಕಿಲೋಮೀಟರ್​ ದೂರ ಸೈಕಲ್​ ಸವಾರಿ ಮಾಡಿ ಬಂದಿದ್ದ.

ಅಕೀಲ್​​ ಹಾಗೂ ಆತನ ಸೈಕಲ್​ನ ಫೋಟೋ ಕ್ಲಿಕ್ಕಿಸಿದ ಮುಕೇಶ್​ ಈ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದರು.

ನನ್ನ ಜೊಮ್ಯಾಟೋ ಆರ್ಡರ್​​ನ್ನು ಅಕೀಲ್​ ಮಿಂಚಿನ ವೇಗದಲ್ಲಿ ತಲುಪಿಸಿದ್ದಾರೆ. ಇವರು ಇಂಜಿನಿಯರಿಂಗ್​​ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ. ಈ ಆರ್ಡರ್​ನ್ನು ಅಕೀಲ್​ ಬೈಸಿಕಲ್​​​ ಸವಾರಿ ಮಾಡಿ ತಂದುಕೊಟ್ಟಿದ್ದಾರೆ. ಇವರಿಗೆ ಟಿಪ್ಸ್ ನೀಡುವ ಮೂಲಕ ಪ್ರೋತ್ಸಾಹ ನೀಡಿ. ಅಂದಹಾಗೆ ನಾನು ಚಹ ಆರ್ಡರ್​ ಮಾಡಿದ್ದೆ ಅದು ಸೂಪರ್​ ಹಾಟ್​ ಆಗಿದೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಯ್ತು. ಹಾಗೂ ಅನೇಕರು ಅಕೀಲ್​ಗೆ ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಿದ್ರು. ಇದಾದ ಬಳಿಕ ಮುಕೇಶ್​​ ಅಕೀಲ್​ಗಾಗಿ ದೇಣಿಗೆ ಸಂಗ್ರಹಕ್ಕೆ ಮುಂದಾದರು. ಆತನಿಗೆ ಒಂದು ಬೈಕ್​ ಕೊಡಿಸಬೇಕೆಂದುಕೊಂಡಿದ್ದ ಮುಕೇಶ್​ ನೆಟ್ಟಿಗರ ಬಳಿ 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಭಿಯಾನ ಬಂದ್​ ಮಾಡುವ ವೇಳೆಯಲ್ಲಿ ಮುಕೇಶ್​ 73,370 ರೂಪಾಯಿಗಳನ್ನ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದೇಣಿಗೆ ಹಣದಿಂದ ನಾನು ಟಿವಿಎಸ್​ ಎಕ್ಸ್​ಎಲ್​​ ಬೈಕ್​ನ್ನು ಅಕೀಲ್​ಗಾಗಿ ಬುಕ್​ ಮಾಡಿದ್ದೇನೆ. ಈ ಬೈಕ್​ನ ಬೆಲೆ ಸರಿ ಸುಮಾರು 65 ಸಾವಿರ ರೂಪಾಯಿ ಇದೆ. ಇನ್ನೆರಡು ದಿನಗಳಲ್ಲಿ ಬೈಕ್​ ಅಕೀಲ್​ ಕೈ ಸೇರಲಿದೆ. ಇದರ ಜೊತೆಯಲ್ಲಿ ಆತನಿಗಾಗಿ ಹೆಲ್ಮೆಟ್​, ರೈನ್​ ಕೋಟ್​ ಸೇರಿದಂತೆ ಇತರೆ ವಸ್ತುಗಳನ್ನೂ ಖರೀದಿ ಮಾಡಲಿದ್ದೇನೆ. ಅಲ್ಲದೇ ಈತನ ಕಾಲೇಜು ಫೀಸ್​ಗಾಗಿ ದೇಣಿಗೆ ಸಂಗ್ರಹ ಮಾಡುತ್ತೇವೆ ಎಂದು ಮುಕೇಶ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...