alex Certify OMG: ಒಂದೇ ಹೆರಿಗೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಒಂದೇ ಹೆರಿಗೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

27 ವರ್ಷದ ಮಹಿಳೆಯು ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್​​ನಲ್ಲಿ ನಡೆದಿದೆ. ಹೈದರಾಬಾದ್​​​ನ ಹಫೀಜ್​ಬಾಬಾ ನಗರದ ನಿವಾಸಿಯಾದ ಮಹಿಳೆಯು ಒಂದೇ ಬಾರಿಗೆ ಒಂದು ಗಂಡು ಮಗು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಈ ರೀತಿ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ 5 ಕೋಟಿ ಮಹಿಳೆಯರಲ್ಲಿ ಒಬ್ಬರು ಜನ್ಮ ನೀಡುತ್ತಾರೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ಹೆರಿಗೆ ಸಾಮಾನ್ಯವಾಗಿ ಅತ್ಯಂತ ಕಠಿಣದಾಯಕವಾಗಿ ಇರುತ್ತದೆ.

ಮೀನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಸ್ತ್ರೀರೋಗ ತಜ್ಞೆ ಡಾ. ಶೋಯೆಬಾ ಶುಕೂರ್​, ಗರ್ಭಿಣಿ ಮೊದಲೇ ರಕ್ತದೊತ್ತಡ ಸಮಸ್ಯೆ ಹೊಂದಿದ್ದಳು. ಆಪರೇಷನ್​ ವೇಳೆಯಂತೂ ಆಕೆಯ ರಕ್ತದೊತ್ತಡ 170/110 ತಲುಪಿತ್ತು ಎಂದು ಹೇಳಿದ್ದಾರೆ.

ಸಿ ಸೆಕ್ಷನ್​ ಮೂಲಕ ಮಗುವನ್ನು ಹೊರತೆಗೆಯಲಾಯ್ತು. ಹೆರಿಗೆ ನಡೆಯುತ್ತಿರುವಾಗಲೇ ಆಕೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಮಕ್ಕಳು ಕೂಡ ಮಲ ವಿಸರ್ಜನೆ ಮಾಡಿದ್ದವು. ಗರ್ಭದಲ್ಲಿಯೇ ಮಕ್ಕಳು ಮಲ ವಿಸರ್ಜನೆ ಮಾಡುವುದು ಅಪಾಯದ ಮುನ್ಸೂಚನೆಯಾಗಿದೆ. ಈ ಸಂದರ್ಭದಲ್ಲಿ ಮಕ್ಕಳು ಸಾವನ್ನಪ್ಪುವ ಅಪಾಯ ಹೆಚ್ಚಿರುತ್ತದೆ. ಇದೊಂದು ಅತ್ಯಂತ ಕಠಿಣ ಹೆರಿಗೆಯಾಗಿತ್ತು. ಬರೋಬ್ಬರಿ 3 ಗಂಟೆಗಳ ಅವಧಿ ಬಳಿಕ ನಾಲ್ಕು ಮಕ್ಕಳನ್ನು ಹೊರತೆಗೆಯಲಾಯ್ತು ಎಂದು ಹೇಳಿದ್ದಾರೆ.

ಈ ಆಸ್ಪತ್ರೆಯಲ್ಲಿ ಈವರೆಗೆ 10 ಸಾವಿರಕ್ಕೂ ಅಧಿಕ ಹೆರಿಗೆಯನ್ನು ಮಾಡಲಾಗಿದೆ. ಆದರೆ ನಾಲ್ವರು ಮಕ್ಕಳಿಗೆ ಗರ್ಭಿಣಿ ಜನ್ಮ ನೀಡಿರೋದು ಈ ಆಸ್ಪತ್ರೆಯ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಇನ್ನು ನಾಲ್ವರು ಮಕ್ಕಳು ಹಾಗೂ ತಾಯಿ ಆರೋಗ್ಯ ಸ್ಥಿರವಾಗಿದೆ. ಇಬ್ಬರು ಮಕ್ಕಳಿಗೆ ಆಕ್ಸಿಜನ್​ ಸಪೋರ್ಟ್ ನೀಡಲಾಗಿದೆ ಹಾಗೂ ಉಳಿದ ಇಬ್ಬರು ಮಕ್ಕಳು ಸಾಮಾನ್ಯವಾಗಿ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...