alex Certify ದಕ್ಷಿಣ ಭಾರತದ ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ವಿಶಾಖಪಟ್ಟಣಂಗೆ ಅಗ್ರಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಭಾರತದ ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ವಿಶಾಖಪಟ್ಟಣಂಗೆ ಅಗ್ರಸ್ಥಾನ

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಗಾಳಿಯು ದಕ್ಷಿಣ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾಲಿನ್ಯಪೂರಿತವಾಗಿದೆ ಎಂದು ಗ್ರೀನ್‌ಪೀಸ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಪಿಎಂ2.5 ಮತ್ತು ಪಿಎಂ10 ಮಾಲಿನ್ಯಕಾರಕಗಳ ಹೊರಸೂಸುವಿಕೆಯ ಮಾನದಂಡದ ಮೇಲೆ ಗಾಳಿಯ ಗುಣಮಟ್ಟದ ನಿಯತಾಂಕಗಳ ವಿಷಯದಲ್ಲಿ ಮುತ್ತಿನ ನಗರಿ ಅತ್ಯಂತ ಕಳಪೆ ಸಾಧನೆ ಮಾಡಿದೆ. ಏತನ್ಮಧ್ಯೆ, ಆಂಧ್ರ ಪ್ರದೇಶದ ವಿಶಾಖಪಟ್ಟಣಂ ದಕ್ಷಿಣ ಭಾರತದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮಗಳನ್ನೆ ದಾನ ಮಾಡಿದ ತಂದೆ‌; ಹೆಣ್ಣು ಆಸ್ತಿಯಲ್ಲ ಎಂದ ಬಾಂಬೆ ಹೈಕೋರ್ಟ್..!

ಈ ವಿಶ್ಲೇಷಣೆಯ ಅವಧಿಯು ನವೆಂಬರ್ 20, 2020 ರಿಂದ ನವೆಂಬರ್ 20, 2021 ರ ವರೆಗೆ ಇದ್ದು ಮತ್ತು ಫಲಿತಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ರಾಷ್ಟ್ರೀಯ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ (NAAQS) ಉಲ್ಲೇಖಿಸಿದಂತೆ ಗಾಳಿಯ ನಿಗದಿತ ಗುಣಮಟ್ಟದ ಮಾನದಂಡಗಳೊಂದಿಗೆ ಹೋಲಿಸಲಾಗಿದೆ.

ಬೆಂಗಳೂರು, ಹೈದರಾಬಾದ್, ಚೆನ್ನೈ, ಅಮರಾವತಿ, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರು, ಪುದುಚೇರಿ, ಕೊಯಮತ್ತೂರು ಮತ್ತು ಮೈಸೂರು — ಹತ್ತು ನಗರಗಳ ವಾಯುಮಾಲಿನ್ಯದ ದತ್ತಾಂಶವನ್ನು ಡೇಟಾ, ಜನಸಂಖ್ಯೆ ಮತ್ತು ಹವಾಮಾನ ಮೇಲ್ವಿಚಾರಣಾ ಕೇಂದ್ರ ಜಾಲಗಳ ಲಭ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ.

ವಿಶಾಖಪಟ್ಟಣಂ ಮತ್ತು ಹೈದರಾಬಾದ್‌ನಲ್ಲಿ ಪಿಎಂ10 ಮಾಲಿನ್ಯಕಾರಕಗಳ ವಾರ್ಷಿಕ ಹೊರಸೂಸುವಿಕೆಯ ಮಟ್ಟಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಗಿದಿತ ಮಾರ್ಗಸೂಚಿಗಳನ್ನು ಏಳು ಪಟ್ಟು ಮೀರಿದ್ದು, ಪಿಎಂ2.5 ಮಟ್ಟಗಳು ಏಳರಿಂದ ಎಂಟು ಪಟ್ಟು ಮೀರಿದೆ ಎಂಬ ಆತಂಕಕಾರಿ ವಿಚಾರವನ್ನು ಈ ವರದಿ ಬಹಿರಂಗಪಡಿಸಿದೆ.

ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್‌ಗಳು ಮತ್ತು ನಂತರದ ದಿನಗಳಲ್ಲಿ ಸಂಚಾರ ದಟ್ಟಣೆಯಲ್ಲಿ ಕಡಿತದ ಹೊರತಾಗಿಯೂ, ಪಿಎಂ2.5 ಮತ್ತು ಪಿಎಂ10ಗಳ ವಾರ್ಷಿಕ ಸರಾಸರಿ ಮೌಲ್ಯಗಳು ವಿಶ್ವ ಸಂಸ್ಥೆಯ ಪರಿಷ್ಕೃತ ಮಾನದಂಡಗಳನ್ನು ಹಲವು ಪಟ್ಟುಗಳಿಂದ ಮೀರಿದೆ.

ವಾಹನ ದಟ್ಟಣೆಯಿಂದ ಉಂಟಾಗುವ ವಾಯು ಮಾಲಿನ್ಯ:

ಸಂಶೋಧಕರ ಪ್ರಕಾರ, ವಾಹನ ಮೂಲಗಳಿಂದ ಬರುವ ಮಾಲಿನ್ಯವನ್ನು ಈ ವಿಚಾರದಲ್ಲಿ ಸ್ಪಷ್ಟ ಅಪರಾಧಿ ಎಂದು ದೂಷಿಸಬಹುದು, ಸಮೀಕ್ಷೆಯ ಅವಧಿಯಲ್ಲಿ ಲಾಕ್‌ಡೌನ್‌ಗಳಿದ್ದರೂ ವಾಹನಗಳ ಮಾಲಿನ್ಯ ಕಡಿಮೆಯಾಗಲಿಲ್ಲ.

“ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ಮೂಲ ಹಂಚಿಕೆ ಅಧ್ಯಯನಗಳು ಹೈದರಾಬಾದ್‌ನಲ್ಲಿ ಪಿಎಂ2.5 ಮತ್ತು ಪಿಎಂ10 ರ ಮುಖ್ಯ ಕೊಡುಗೆಯು ವಾಹನ ಮಾಲಿನ್ಯವಾಗಿದೆ ಎಂದು ಸೂಚಿಸಿವೆ. ಈ ಮೂಲವು ಒಟ್ಟು ಮಾಲಿನ್ಯದ ಸುಮಾರು 50% ರಷ್ಟು ಕೊಡುಗೆ ನೀಡುತ್ತದೆ. ನಾವು ಈ ವಿಚಾರದಲ್ಲಿ ತಕ್ಷಣದ ಬದಲಾವಣೆಗೆ ಆದ್ಯತೆ ನೀಡಬೇಕಿದ್ದು, ಶುದ್ಧ ಇಂಧನ ಮತ್ತು ಶುದ್ಧ ಸಾರಿಗೆ ಅಳವಡಿಕೆಯು ಅನಿಯಂತ್ರಿತ ಮಾಲಿನ್ಯವನ್ನು ನಿಲ್ಲಿಸಲು ಸಾಧ್ಯವಾಗುತ್ತದೆ,” ಎಂದು ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಹೇಳಿದ್ದಾರೆ.

ಹೈದರಾಬಾದ್‌ನಂತಹ ನಗರಗಳು ಖಾಸಗಿ ವಾಹನಗಳಿಗೆ ಮೂಲಸೌಕರ್ಯಗಳನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸುತ್ತಿವೆಯೇ ಹೊರತು ಸಾರ್ವಜನಿಕ ಸಾರಿಗೆಗೆ ಮನ್ನಣೆಯನ್ನೇ ಕೊಡುತ್ತಿಲ್ಲ ಎಂದು ಅವರು ಇದೇ ವೇಳೆ ಒತ್ತಿ ಹೇಳಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...