alex Certify 161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ…!

ಹೈದರಾಬಾದ್​ನ ಭೌತಶಾಸ್ತ್ರಜ್ಞ ಕುಮಾರ್​ ಈಶ್ವರನ್​ ಎಂಬವರು ಬರೋಬ್ಬರಿ 161 ವರ್ಷದಿಂದ ಯಾರಿಂದಲೂ ಬಗೆಹರಿಸಲು ಸಾಧ್ಯವಾಗದ ರೈಮನ್​ ಹೈಪೋಥಿಸ್​ಗೆ ಪರಿಹಾರ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದಾರೆ.

1859ರಲ್ಲಿ ಬರ್ನ್​ಹಾರ್ಡ್​ ರೀಮನ್​ ಪ್ರತಿಪಾದಿಸಿದ ರೀಮನ್​ ಹೈಪೋಥಿಸಿಸ್​ ಸಮಸ್ಯೆಯನ್ನ ಅಮೆರಿಕದ ಖ್ಯಾತ ಗಣಿತಜ್ಞ ಸ್ಟಿಫನ್​ ಸ್ಮಾಲೆ ಅವರಿಂದ ಬಗೆಹರಿಸಲು ಸಾಧ್ಯವಾಗದ ಟಾಪ್​ 10 ಗಣಿತದ ಸಮಸ್ಯೆಗಳಲ್ಲಿ ಸ್ಥಾನ ಪಡೆದಿದೆ. ಅಲ್ಲದೇ ರೀಮನ್​ ಹೈಫೋಥಿಸ್​​ ಸಮಸ್ಯೆಯನ್ನ 7 ಮಿಲೇನಿಯಂ ಗಣಿತದ ಸಮಸ್ಯೆಗಳಲ್ಲಿ ಒಂದು ಎಂದು ಕ್ಲೇ ಮ್ಯಾಥಮೆಟಿಕ್ಸ್​​ ಇನ್​ಸ್ಟಿಟ್ಯೂಟ್​ ಆಫ್​​ ಕ್ರ್ಯಾಂಬಿಡ್ಜ್​ ಹೇಳಿದ್ದು ಈ ಸಮಸ್ಯೆಯನ್ನ ಬಗೆಹರಿಸುವವರಿಗೆ 1 ಮಿಲಿಯನ್​ ಡಾಲರ್​​ ಬಹುಮಾನ ಕೊಡೋದಾಗಿಯೂ ಹೇಳಲಾಗಿದೆ.

ಈಶ್ವರನ್​​ ಶ್ರೀನಿಧಿ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ & ಟೆಕ್ನಾಲಜಿಯಲ್ಲಿ ಗಣಿತ ಭೌತಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಯಾರಿಂದಲೂ ಸಾಧ್ಯವಾಗದ ಈ ಜಟಿಲ ಸಮಸ್ಯೆಗೆ ಪರಿಹಾರ ಕಂಡುಹಿಡಿದಿರೋದಾಗಿ ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಈಶ್ವರನ್​, ನಾನು 2016ರಲ್ಲೇ ಈ ಜಟಿಲ ಸಮಸ್ಯೆಗೆ ಪರಿಹಾರ ನೀಡಿದ್ದೆ. ಸುಮಾರು ಆರು ವಾರಗಳ ಕಾಲ ಈ ರೀಮನ್​​ ಹೈಪೋಥಿಸಿಸ್​ ಮೇಲೆ ಕೆಲಸ ಮಾಡಿದ್ದು ಇದರ ಬಗ್ಗೆ ಮುಕ್ತ ಚರ್ಚೆಗೂ ಸಿದ್ಧನಿದ್ದೇನೆ. 2018-19ರಲ್ಲಿ ಸಾಕಷ್ಟು ಕಡೆ ಇದಕ್ಕೆ ವಿವರಣೆಯನ್ನೂ ನೀಡಿದ್ದೇನೆ ಎಂದು ಹೇಳಿದ್ರು. 2020ರಲ್ಲಿ ಈ ಸಮಸ್ಯೆಗೆ ಈಶ್ವರನ್​ ನೀಡಿರುವ ಪರಿಹಾರ ಸರಿಯಾಗಿದೆಯೇ ಎಂದು ನೋಡಲು 8 ಮಂದಿ ಗಣಿತಜ್ಞರು ಹಾಗೂ ಭೌತಶಾಸ್ತ್ರಜ್ಞರ ಸಮಿತಿಯನ್ನ ರಚನೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...