alex Certify ಈ ಪಾರ್ಕ್​ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪಾರ್ಕ್​ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ

ಪಾರ್ಕ್​ ಅಂದಮೇಲೆ ಸಾರ್ವಜನಿಕ ಬಳಕೆಗೆ ಇರುವಂತದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಹೈದರಾಬಾದ್​ನಲ್ಲಿರುವ ಪಾರ್ಕ್​ ಒಂದರ ಆವರಣದಲ್ಲಿ ‘ಅವಿವಾಹಿತ ಜೋಡಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್​ನ್ನು ಅಂಟಿಸುವ ಮೂಲಕ ಸುದ್ದಿಯಾಗಿದೆ. ಪಾರ್ಕ್​ನ ಆಡಳಿತ ಮಂಡಳಿಯು ‘ಅವಿವಾಹಿತ ಜೋಡಿಗಳು ಪಾರ್ಕ್ ಒಳಗೆ ಪ್ರವೇಶಿಸುವಂತಿಲ್ಲ’ ಎಂಬ ಬ್ಯಾನರ್​ನ್ನು ಅಂಟಿಸಿದೆ.

ಟ್ವಿಟರ್​ ಬಳಕೆದಾರರಾದ ಮೀರಾ ಸಂಘಮಿತ್ರಾ ಎಂಬವರು ಈ ಬ್ಯಾನರ್​ನ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಹೈದಬಾದ್​ನ ಇಂದಿರಾ ಪಾರ್ಕ್​ ಎಂಜಿಎಂಟಿಯಲ್ಲಿ ನೈತಿಕ ಪೊಲೀಸ್​ಗಿರಿ..! ಸಾರ್ವಜನಿಕ ಪಾರ್ಕ್​ ಎಲ್ಲಾ ಮಾದರಿಯ ಜನರಿಗೆ ಎಂದು ಮೀಸಲಾದ ಪ್ರದೇಶವಾಗಿದೆ. ಇಲ್ಲಿ ಲಿಂಗ ಅಥವಾ ಇನ್ಯಾವುದೇ ರೀತಿಯ ತಾರತಮ್ಯ ಸಲ್ಲದು. ಮದುವೆ ಅನ್ನೋದು ಪಾರ್ಕ್ ಪ್ರವೇಶಕ್ಕೆ ಮಾನದಂಡವನ್ನಾಗಿಸೋದು ಎಷ್ಟರ ಮಟ್ಟಿಗೆ ಸರಿ..? ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಇದೊಂದು ಜನ ವಿರೋಧಿ ಕ್ರಮವಾಗಿದೆ. ಇಂದಿರಾ ಪಾರ್ಕ್​ಗೆ ಬರುವ ಜೋಡಿಗಳು ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯ ಹೊಂದಿದವರಾಗಿದ್ದಾರೆ. ಇವರಿಗೆ ಹೈ ಫೈ ಪಬ್​ ಇಲ್ಲವೇ ದುಬಾರಿ ಸ್ಥಳಗಳಿಗೆ ತೆರಳಲು ಸಾಧ್ಯವಿಲ್ಲ. ಅವರೂ ಸಹ ಈ ಪಾರ್ಕ್ ಪ್ರವೇಶಿಸುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ. ಹೀಗಾಗಿ ಇಂತಹ ಹಾಸ್ಯಾಸ್ಪದ ನಿರ್ಬಂಧಗಳನ್ನು ಮೊದಲು ತೆಗೆದು ಹಾಕಿ ಎಂದು ಮೀರಾ ಟ್ವಿಟರ್​ನಲ್ಲಿ ಆಗ್ರಹಿಸಿದ್ದಾರೆ.

ವಿಚಿತ್ರ ನಿಯಮಾವಳಿಯನ್ನು ಜಾರಿಗೆ ತಂದ ಪಾರ್ಕ್​ನ ನಿರ್ವಹಣಾ ಮಂಡಳಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಸ್ಥಳಕ್ಕೆ ತೆರಳಲು ಮದುವೆ ಪ್ರಮಾಣ ಪತ್ರ ಬೇಕೇ..? ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತೆರಳುವಾಗ ಫೋಟೋ ಐಡಿ ಬದಲು ಮದುವೆ ಪ್ರಮಾಣ ಪತ್ರ ಹಿಡಿದುಕೊಂಡು ತಿರುಗುವ ಕಾಲ ಸದ್ಯದಲ್ಲೇ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಅನೇಕರು ಮದುವೆ ಆಯ್ತು ಜಾತಿ ಮಾನದಂಡವನ್ನೂ ವಿಧಿಸಿಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

— Meera Sanghamitra (@meeracomposes) August 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...