alex Certify ವಿಡಿಯೋ: ಹೆದ್ದಾರಿ ನಡುವೆಯೇ ದಾರಿಹೋಕನ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಹೆದ್ದಾರಿ ನಡುವೆಯೇ ದಾರಿಹೋಕನ ಡಾನ್ಸ್

ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ನಮಗೂ ಇತರರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರಿಗೆ ರಸ್ತೆ ನಡವೆ ಸ್ಟಂಟ್ ಮಾಡುತ್ತಾ ಇರುವುದು ಒಂಥರಾ ಶೋಕಿ ಎನಿಸಿಬಿಟ್ಟಿದೆ.

ಇಂಥದ್ದೇ ನಿದರ್ಶನವೊಂದರಲ್ಲಿ, ಹೈದರಾಬಾದ್‌ನ ಮಾದಾಪುರ ಪ್ರದೇಶದಲ್ಲಿರುವ ದುರ್ಗಂ ಚೆರುವು ಕೇಬಲ್ ಸೇತುವೆ ಮೇಲೆ ವ್ಯಕ್ತಿಯೊಬ್ಬರು ಕುಣಿಯುತ್ತಿರುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸೈಬರಾಬಾದ್ ಸಂಚಾರಿ ಪೊಲೀಸರು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋ: ಮಾಸ್ಕ್‌ ಇಲ್ಲದೇ ಹುಟ್ಟುಹಬ್ಬ ಆಚರಿಸಿದ ಎಸ್‌ಪಿ ಶಾಸಕನ ವಿರುದ್ಧ ಕೇಸ್

ಚಲಸುತ್ತಿರುವ ಟ್ರಾಫಿಕ್ ನಡುವೆಯೇ ರಸ್ತೆ ಮಧ್ಯಕ್ಕೆ ಬಂದ ಈತ, ವಾಹನಗಳೆಲ್ಲಾ ಖಾಲಿಯಾದ ಮೇಲೆ ಅಲ್ಲಿ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾನೆ. ಆತನ ಈ ಕೆಲಸಕ್ಕೆ ಸ್ನೇಹಿತರಿಂದ ಉತ್ತೇಜನ ಸಿಕ್ಕಿದೆ.

“ದಯವಿಟ್ಟು ರಸ್ತೆ ಮೇಲೆ ಸ್ಟಂಟ್‌ಗಳು ಹಾಗೂ ಡ್ಯಾನ್ಸ್ ಮಾಡಬೇಡಿ,” ಎಂದು ಸೈಬರಾಬಾದ್ ಪೊಲೀಸರು ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...