alex Certify ಪ್ರೀತಿ ನಿರಾಕರಿಸಿದ ಯುವತಿಗೆ ಬರೋಬ್ಬರಿ 18 ಬಾರಿ ಇರಿದ ಪಾಗಲ್​ ಪ್ರೇಮಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ ನಿರಾಕರಿಸಿದ ಯುವತಿಗೆ ಬರೋಬ್ಬರಿ 18 ಬಾರಿ ಇರಿದ ಪಾಗಲ್​ ಪ್ರೇಮಿ……!

ಮದುವೆ ಆಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಭಗ್ನಪ್ರೇಮಿ ತನ್ನ ಪ್ರಿಯತಮೆಗೆ 18 ಬಾರಿ ಇರಿದ ಶಾಕಿಂಗ್​ ಘಟನೆಯು ಹೈದರಾಬಾದ್​ನಲ್ಲಿ ನಡೆದಿದೆ.

ಯುವತಿಯನ್ನು ಶಿರಿಶಾ ಎಂದು ಗುರುತಿಸಲಾಗಿದ್ದು ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಿಶಾ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಸವರಾಜ್​ ಎಂದು ಗುರುತಿಸಲಾಗಿದೆ. ಹೈದರಾಬಾದ್​​ನ ಎಲ್​ಬಿ ನಗರದ ರೂಮೊಂದರಲ್ಲಿ ಘಟನೆ ನಡೆದಿದೆ.

ಶಿರಿಶಾ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಬಸವರಾಜ್​ ಖಿನ್ನತೆಗೆ ಒಳಗಾಗಿದ್ದ. ಶಿರಿಶಾ ಎರಡು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.
ಆರೋಪಿ ಹಾಗೂ ಯುವತಿ ಇಬ್ಬರೂ ವಿಕಾರಬಾದ್​ ಜಿಲ್ಲೆಯ ದೌಲತಾಬಾದ್​ ನಿವಾಸಿಗಳಾಗಿದ್ದಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...