alex Certify ಈತನಿಗೆ ಬಂತು ವರ್ಷದ ಅತ್ಯುತ್ತಮ ಪತಿದೇವ ಬಿರುದು….! ಕಾರಣ ತಿಳಿಯಲು ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತನಿಗೆ ಬಂತು ವರ್ಷದ ಅತ್ಯುತ್ತಮ ಪತಿದೇವ ಬಿರುದು….! ಕಾರಣ ತಿಳಿಯಲು ಈ ವಿಡಿಯೋ ನೋಡಿ

ಸಂತೋಷವೇ ಜೀವನದ ಅತ್ಯುತ್ತಮ ಮೇಕ್ಅಪ್ ಎಂದು ಹೇಳುತ್ತದೆಯಾದರೂ ಕೆಲವರಿಗೆ ಮೇಕಪ್ಪೇ ಜೀವನವಾಗಿರುತ್ತದೆ. ನೈಜ ಸೌಂದರ್ಯವನ್ನು ಮರೆಮಾಚಿ ಮೇಕಪ್​ ಮಾಡಿಕೊಳ್ಳುವುದು ಎಂದರೆ ಕೆಲವರಿಗೆ ಅದೇನೋ ವ್ಯಾಮೋಹ. ಆದರೆ ಇಲ್ಲಿ ಹೇಳಹೊರಟಿರುವುದು ಮೇಕಪ್​ ಬಗ್ಗೆಯಲ್ಲ, ಬದಲಿಗೆ ವರ್ಷದ ಬೆಸ್ಟ್​ ಪತಿರಾಯ ಎಂದು ನೆಟ್ಟಿಗರು ಬಿರುದು ಕೊಟ್ಟಿರುವ ಪತಿಯೊಬ್ಬನ ಬಗ್ಗೆ!

ಹೌದು. ಈ ವೈರಲ್​ ವಿಡಿಯೋ ನೋಡಿದರೆ ಸಾಕು, ಬರೆಯುವ ಅವಶ್ಯಕತೆ ಇಲ್ಲ…… ಎಲ್ಲವನ್ನೂ ಇದೇ ಹೇಳಿಬಿಡುತ್ತದೆ. ಸ್ಟೇಡಿಯಂವೊಂದರಲ್ಲಿ ಕ್ರಿಕೆಟ್​ ವೀಕ್ಷಣೆ ಸಂದರ್ಭದಲ್ಲಿ ನಡೆದ ಹಾಸ್ಯಭರಿತ ಘಟನೆ ಇದಾಗಿದ್ದು, ಈ ಪತಿಯನ್ನು ವರ್ಷದ ಅತ್ಯುತ್ತಮ ಪತಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಈ ವೈರಲ್​ ವಿಡಿಯೋದಲ್ಲಿ ಕ್ರಿಕೆಟ್​ ವೀಕ್ಷಣೆ ಮಾಡುತ್ತಿದ್ದ ಪತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಪತ್ನಿಗೆ ಮೇಕಪ್​ ಮಾಡಿಕೊಳ್ಳಲು ಮೊಬೈಲ್​ ಹಿಡಿದಿರುವುದನ್ನು ಕಾಣಬಹುದಾಗಿದೆ. ಪತ್ನಿಗೆ ಮೇಕಪ್​ ಮಾಡಿಕೊಳ್ಳಲು ಕನ್ನಡಿ ಇಲ್ಲದ ಕಾರಣ, ಪತಿರಾಯ ತನ್ನ ಮೊಬೈಲ್​ ಹಿಡಿದು ಆಕೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಪತಿಗೆ ಇದು ಇಷ್ಟವಿಲ್ಲ ಎಂಬುದು ಮುಖದಲ್ಲಿಯೇ ಕಾಣುತ್ತಿದ್ದರೂ, ಆತ ಅಸಹಾಕಯನಾಗಿದ್ದಾನೆ ಎಂದು ಹಲವರು ಕಮೆಂಟ್​ ಮೂಲಕ ಹೇಳುತ್ತಿದ್ದಾರೆ!

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...