alex Certify ವಿಡಿಯೋ: ಮದುವೆ ಸಮಾರಂಭದ ಮಧ್ಯೆಯೇ ಚೈನೀಸ್ ಖಾದ್ಯಗಳ ಭರ್ಜರಿ ಬ್ಯಾಟಿಂಗ್ ಮಾಡಿದ ಮದುಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಮದುವೆ ಸಮಾರಂಭದ ಮಧ್ಯೆಯೇ ಚೈನೀಸ್ ಖಾದ್ಯಗಳ ಭರ್ಜರಿ ಬ್ಯಾಟಿಂಗ್ ಮಾಡಿದ ಮದುಮಗಳು

ಮದುವೆ ಸಮಾರಂಭಗಳಲ್ಲಿ ಇಟ್ಟುಕೊಳ್ಳುವ ಹತ್ತಾರು ಶಾಸ್ತ್ರಗಳೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ಮದುಮಕ್ಕಳಿಗೆ ಅದ್ಯಾವ ಮಟ್ಟದಲ್ಲಿ ಹೊಟ್ಟೆ ಹಸಿದಿರುತ್ತದೆ ಎಂದು ಅವರಿಗೇ ಗೊತ್ತಿರುವ ವಿಚಾರ.

ಕೆಲವೊಮ್ಮೆ ಮದುಮಕ್ಕಳು ಈ ಅವಧಿಯಲ್ಲಿ ಸರಿಯಾಗಿ ಊಟ ಮಾಡಲು ಆಗುವುದಿಲ್ಲ. ಭೋಜನಪ್ರಿಯ ಮದುಮಕ್ಕಳಾದರಂತೂ ಅವರ ಪಾಡು ದೇವರಿಗೇ ಪ್ರೀತಿ.

ಆದರೆ ಯಾವುದೇ ಪರಿಸ್ಥಿತಿ ಇದ್ದರೂ ತಿನ್ನೋದಕ್ಕೆ ಮೊದಲ ಆದ್ಯತೆ ಕೊಡಬಯಸುವ ಮದುಮಕ್ಕಳದ್ದೇ ಒಂದು ರೀತಿಯ ಜಾಲಿ ಕೆಲಸ ನೋಡಿ.

ಮದುವಣಗಿತ್ತಿಯ ಅವತಾರದಲ್ಲಿ ಕಂಗೊಳಿಸುತ್ತಿರುವ ಮದುಮಗಳೊಬ್ಬಳು ಶಾಸ್ತ್ರಗಳು ಆರಂಭಗೊಳ್ಳುವ ಕೆಲವೇ ಕ್ಷಣಗಳ ಹಿಂದೆ ಚೈನೀಸ್ ಖಾದ್ಯಗಳನ್ನು ಗಡದ್ದಾಗಿ ಮೆಲ್ಲುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಲೆಹಂಗಾ ಮತ್ತು ಭಾರೀ ಆಭರಣಗಳನ್ನು ಧರಿಸಿರುವಂತೆಯೇ ಈಕೆ ಭರ್ಜರಿ ಬ್ಯಾಟಿಂಗ್ ಮಾಡುತ್ತಾ, “ಸಾರಿ, ನಾನೊಬ್ಬ ಭೋಜನಪ್ರಿಯ ಸೊಸೆ ಮತ್ತು ನನ್ನ ಅತ್ತೆ ಮನೆಯವರು ಇದನ್ನು ಇಷ್ಟ ಪಡುತ್ತಾರೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...