alex Certify ಅಪರೂಪದ ಬಿಳಿ ಹುಲಿ ಸಾವು; ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಬಿಳಿ ಹುಲಿ ಸಾವು; ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿ

ಮಧ್ಯಪ್ರದೇಶದ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಬಿಳಿ ಹುಲಿ ವಿಂಧ್ಯಾ ಸಾವನ್ನಪ್ಪಿದ್ದು ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ವಿಂಧ್ಯಾ, ಮೇ 9 ರಂದು ಮಂಗಳವಾರ ಮೃಗಾಲಯದಲ್ಲಿ ಕೊನೆಯುಸಿರೆಳೆದ ಮೊದಲ ಬಿಳಿ ಹುಲಿ. 16 ವರ್ಷದ ಬಿಳಿ ಹುಲಿಯ ಅಂತಿಮ ಸಂಸ್ಕಾರವನ್ನು ನಡೆಸಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ದೀರ್ಘಕಾಲದ ಅನಾರೋಗ್ಯದ ನಂತರ ಬಿಳಿ ಹುಲಿ ಸಾವನ್ನಪ್ಪಿದೆ. ಅಂತ್ಯಕ್ರಿಯೆ ವೀಡಿಯೊದಲ್ಲಿ ಅರಣ್ಯ ಅಧಿಕಾರಿಗಳು, ಪೊಲೀಸರು, ಮೃಗಾಲಯದ ಅಧಿಕಾರಿಗಳು ಮತ್ತು ಸ್ಥಳೀಯರು ಬಿಳಿ ಹುಲಿಯ ಮೃತದೇಹವನ್ನು ಸಾಗಿಸುತ್ತಿರುವುದನ್ನು ನೋಡಬಹುದು. ಅಂತ್ಯಕ್ರಿಯೆಯ ಧಾರ್ಮಿಕ ವಿಧಿ ಮತ್ತು ದಹನವನ್ನು ವೀಕ್ಷಿಸಲು ನೂರಾರು ಜನ ಸೇರಿದ್ದರು.

ಹುಲಿಗೆ ಮೂತ್ರಪಿಂಡದಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿತ್ತು. ಅದು ಸಾಯುವ 15 ದಿನಗಳ ಮೊದಲು ಆಹಾರ ಸೇವನೆ ನಿಲ್ಲಿಸಿತ್ತು.

ಮಧ್ಯಪ್ರದೇಶದ ರೇವಾದಲ್ಲಿರುವ ಮಹಾರಾಜ ಮಾರ್ತಾಂಡ್ ಸಿಂಗ್ ಜೂಡಿಯೊ ವೈಟ್ ಟೈಗರ್ ಸಫಾರಿ ಸೇರಿದಂತೆ ಮೃಗಾಲಯದಲ್ಲಿ 60 ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹುಲಿ ಪ್ರಭೇದಗಳಿವೆ.

— ANI MP/CG/Rajasthan (@ANI_MP_CG_RJ) May 9, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...