alex Certify ಕೋವಿಡ್​ 19 ಸಂದರ್ಭದಲ್ಲಿ ಮಹಿಳೆಯರ ಋತುಚಕ್ರದ ಮೇಲೆ ಉಂಟಾಗಿದೆ ಈ ಗಂಭೀರ ಪರಿಣಾಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 19 ಸಂದರ್ಭದಲ್ಲಿ ಮಹಿಳೆಯರ ಋತುಚಕ್ರದ ಮೇಲೆ ಉಂಟಾಗಿದೆ ಈ ಗಂಭೀರ ಪರಿಣಾಮ….!

ಕೋವಿಡ್​ 19 ಸಂದರ್ಭದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಸಾಕಷ್ಟು ಮಹಿಳೆಯರು ಅನಿಯಮಿತ ಋತುಚಕ್ರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೊಸ ವೈದ್ಯಕೀಯ ಅಧ್ಯಯನವೊಂದು ಕಂಡು ಹಿಡಿದಿದೆ.

ನಾರ್ಥ್​ವೆಸ್ಟರ್ನ್​ ಮೆಡಿಸಿನ್​ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಕೋವಿಡ್​ 19 ಸಂದರ್ಭದಲ್ಲಿ ಒತ್ತಡ ಹೆಚ್ಚಾಗಿರುವುದರಿಂದ ಮಹಿಳೆಯರ ಋತುಚಕ್ರವು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಅಧ್ಯಯನವನ್ನು ಜರ್ನಲ್​ ಆಫ್​ ವುಮೆನ್ಸ್​ ಹೆಲ್ತ್​ನಲ್ಲಿ ಪ್ರಕಟಿಸಲಾಗಿದೆ.

ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿದ ಒತ್ತಡವು ಋತುಚಕ್ರದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ತಿಳಿಯಲು ಅಮೆರಿಕದಲ್ಲಿ ಕಳೆದ ವರ್ಷ ಜುಲೈ ಹಾಗೂ ಅಗಸ್ಟ್​ ತಿಂಗಳಲ್ಲಿ ಸುಮಾರು 200ಕ್ಕೂ ಅಧಿಕ ಮಹಿಳೆಯರ ಮೇಲೆ ಅಧ್ಯಯನ ನಡೆಸಲಾಗಿತ್ತು. ‘
ಇದರಲ್ಲಿ 54 ಪ್ರತಿಶತಕ್ಕಿಂತ ಅಧಿಕ ಮಹಿಳೆಯರು ಋತುಚಕ್ರದಲ್ಲಿ ಸಮಸ್ಯೆ ಉಂಟಾಗಿದ್ದನ್ನು ಗಮನಿಸಿದ್ದಾರೆ. ಕಳೆದ ವರ್ಷ ಮಾರ್ಚ್​ನಿಂದ ತಮಗೆ ಋತುಚಕ್ರದಲ್ಲಿ ಬದಲಾವಣೆಗಳು ಕಂಡು ಬಂದಿದೆ ಎಂದು ಹೇಳಿಕೊಂಡಿದ್ದಾರೆ.

ಕೋವಿಡ್ 19 ಸಂದರ್ಭದಲ್ಲಿ ಮಧ್ಯಮ ಪ್ರಮಾಣದಲ್ಲಿ ಒತ್ತಡವನ್ನು ಅನುಭವಿಸಿದವರಿಗಿಂತ ಹೆಚ್ಚಿನ ಒತ್ತಡ ಅನುಭವಿಸಿದ್ದ ಮಹಿಳೆಯರು ಋತುಚಕ್ರದ ವಿಚಾರದಲ್ಲಿ ತುಂಬಾ ಸಂಕಷ್ಟಗಳನ್ನು ಎದುರಿಸಿದ್ದಾರೆ. ಅತಿಯಾದ ರಕ್ತಸ್ರಾವ ಹಾಗೂ ಹೆಚ್ಚಿನ ದಿನಗಳ ಕಾಲ ಮುಟ್ಟಿನ ಕಷ್ಟವನ್ನು ಅನುಭವಿಸಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...