alex Certify ದಪ್ಪನೆ ತೋಳುಗಳಿಂದ ಮುಜುಗರಕ್ಕೀಡಾಗ್ತಿದ್ದೀರಾ ? ಇಲ್ಲಿದೆ ತೋಳಿನ ಕೊಬ್ಬು ಕರಗಿಸಲು ಸರಳ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಪ್ಪನೆ ತೋಳುಗಳಿಂದ ಮುಜುಗರಕ್ಕೀಡಾಗ್ತಿದ್ದೀರಾ ? ಇಲ್ಲಿದೆ ತೋಳಿನ ಕೊಬ್ಬು ಕರಗಿಸಲು ಸರಳ ಉಪಾಯ

ನಾವು ಸಾಮಾನ್ಯವಾಗಿ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುವ ಬಗ್ಗೆ ಹೆಚ್ಚಿನ ಗಮನಹರಿಸುತ್ತೇವೆ. ಏಕೆಂದರೆ ಇದು ನಮ್ಮ ದೇಹದ ಒಟ್ಟಾರೆ ಆಕಾರವನ್ನು ಹಾಳು ಮಾಡುತ್ತದೆ.

ಆದರೆ ಜನರು ತಮ್ಮ ತೋಳುಗಳಲ್ಲಿ  ಸಂಗ್ರಹವಾಗಿರುವ ಕೊಬ್ಬಿನ ಬಗ್ಗೆ ಗಮನಕೊಡುವುದಿಲ್ಲ. ಮನೆಗಳಲ್ಲಿ ಬಹುತೇಕ ಕೆಲಸಗಳೆಲ್ಲ ಮಷಿನ್‌ಗಳಲ್ಲಿ ಆಗುವುದರಿಂದ ತೋಳುಗಳಿಗೆ ಹೆಚ್ಚು ವ್ಯಾಯಾಮವಾಗದೇ ಅದರಲ್ಲಿ ಕೊಬ್ಬು ಶೇಖರಣೆಯಾಗತೊಡಗುತ್ತದೆ.

ತೋಳುಗಳು ದಪ್ಪಗಿದ್ದರೆ ಸ್ಲೀವ್‌ಲೆಸ್‌ ಬಟ್ಟೆ ತೊಟ್ಟಾಗ ಅಸಹ್ಯವಾಗಿ ಕಾಣಿಸುತ್ತದೆ. ಆದರೆ ಈ ಸಮಸ್ಯೆಗೂ ಸುಲಭ ಪರಿಹಾರವಿದೆ. ನೀವು ತೋಳುಗಳನ್ನು ಟೋನ್ ಮಾಡಿಕೊಳ್ಳಬಹುದು.

ದೈಹಿಕ ತರಬೇತಿ

ಶಾಲಾ ದಿನಗಳಲ್ಲಿ ಪಿಟಿ ಕ್ಲಾಸ್‌ ಇದ್ದಾಗ ನೀವು ಮಾಡುತ್ತಿದ್ದ ಕಸರತ್ತುಗಳನ್ನು ನೆನಪಿಸಿಕೊಳ್ಳಿ. ಅದೇ ರೀತಿ ನೀವು ಮನೆಯಲ್ಲೇ ಮಾಡಬೇಕು. ಅಗತ್ಯವೆನಿಸಿದರೆ ತರಬೇತುದಾರರ ಸಹಾಯ ಪಡೆದುಕೊಳ್ಳಬಹುದು. ವಿಶೇಷವಾಗಿ ನೀವು 100 ಬಾರಿ ಸೈಡ್ ಜಂಪ್ ಮಾಡಿದರೆ, ತೋಳುಗಳಲ್ಲಿ ಸಂಗ್ರಹವಾಗಿರುವ ಕೊಬ್ಬು ಕ್ರಮೇಣ ಕಡಿಮೆಯಾಗುತ್ತದೆ.

ಗಾಳಿಪಟ ಹಾರಿಸುವುದು

ಭಾರತದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಇದೊಂದು ರೀತಿಯ ಆಟವೂ ಹೌದು. ಬಾಲ್ಯದಲ್ಲಿ ಮಾಡಿದ ಈ ಕೆಲಸವನ್ನು ನಂತರವೂ ಮುಂದುವರಿಸಿ. ಇದು ಮನರಂಜನೆಯ ಉತ್ತಮ ಮೂಲ ಮಾತ್ರವಲ್ಲ, ಇದು ನಿಮ್ಮ ಇಡೀ ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ ಮತ್ತು ಮನಸ್ಸನ್ನು ಸಕ್ರಿಯವಾಗಿರಿಸುತ್ತದೆ. ಗಾಳಿಪಟವನ್ನು ಹಾರಿಸುವಾಗ ನಾವು ಹಲವಾರು ಬಾರಿ ಡ್ರಮ್ ಅನ್ನು ಎಳೆಯುವುದರಿಂದ ತೋಳುಗಳ ಕೊಬ್ಬು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಹಗ್ಗ ಜಂಪಿಂಗ್‌

ನೀವು ಚಿಕ್ಕವರಿದ್ದಾಗ ಹಗ್ಗವನ್ನು ಹಾರಿಸಿರಬೇಕು, ಈ ಬಾಲ್ಯದ ಅಭ್ಯಾಸವನ್ನು ಪುನರಾವರ್ತಿಸಬೇಕು. ಇದರಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತೀರಿ. ಪಾದಗಳ ಜೊತೆಗೆ ಕೈಗಳ ಚಲನೆ ಹೆಚ್ಚು ಇರುವುದರಿಂದ, ತೋಳಿನ ಕೊಬ್ಬನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯ ಮಾಡುತ್ತದೆ. ಈ ವ್ಯಾಯಾಮದ ಸಹಾಯದಿಂದ ನೀವು ಒಟ್ಟಾರೆ ದೇಹದ ತೂಕವನ್ನು ಸಹ ಕಡಿಮೆ ಮಾಡಬಹುದು. ಸ್ಕಿಪ್ಪಿಂಗ್‌ಗಾಗಿ ದಿನದಲ್ಲಿ ಕೆಲವು ನಿಮಿಷಗಳನ್ನು ಮೀಸಲಾಗಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...