alex Certify ಡಿಜಿಟಲ್ ಓಟರ್‌ ಐಡಿ ಡೌನ್‌ಲೋಡ್ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್ ಓಟರ್‌ ಐಡಿ ಡೌನ್‌ಲೋಡ್ ಮಾಡಲು ಇಲ್ಲಿದೆ ಟಿಪ್ಸ್

ಮತದಾರರ ಗುರುತಿನ ಚೀಟಿ ಬಹಳ ಮುಖ್ಯವಾದ ಗುರುತಿನ ಪುರಾವೆ. ಚುನಾವಣಾ ಹಕ್ಕುಗಳನ್ನು ಚಲಾಯಿಸಲು ಅನುಮತಿಸುವ ಅತ್ಯಂತ ಪ್ರಮುಖ ದಾಖಲೆ. ಸರ್ಕಾರಿ ದಾಖಲಾತಿಯನ್ನು ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯನ್ನಾಗಿ ಮಾಡುವ ದೃಷ್ಟಿಯಿಂದ, ಭಾರತ ಸರ್ಕಾರವು ಮತದಾರರ ಗುರುತಿನ ಚೀಟಿಯ ಹೆಚ್ಚು ಸುರಕ್ಷಿತ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಇ- ಎಪಿಕ್ ಕಾರ್ಡ್ ಅನ್ನು ಪ್ರಾರಂಭಿಸಿದೆ.

ಈ ಎಲೆಕ್ಟ್ರಾನಿಕ್/ಡಿಜಿಟಲ್ ಕಾರ್ಡ್ ಮತದಾರರ ಗುರುತಿನ ಚೀಟಿಯ ಹೆಚ್ಚು ಸುರಕ್ಷಿತವಾದ ಪಿಡಿಎಫ್‌ ಆವೃತ್ತಿಯಾಗಿದೆ. ಇದನ್ನು ನಿಮ್ಮ ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ಫೋನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ನಿಮ್ಮ e-EPIC PDF ಕಾರ್ಡ್ ಅಥವಾ ಆನ್‌ಲೈನ್ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಲು ಹಂತ ಹಂತದ ಪ್ರಕ್ರಿಯೆ ಇಲ್ಲಿದೆ

ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಇಲ್ಲಿದೆ ಖುಷಿ ಸುದ್ದಿ

– https://nvsp.in ಗೆ ಲಾಗಿನ್ ಆಗಿ e-EPIC ಅನ್ನು ಡೌನ್‌ಲೋಡ್ ಮಾಡಬಹುದು‌

– NVSP ನಲ್ಲಿ ನೋಂದಾಯಿಸಿ/ಲಾಗಿನ್ ಮಾಡಿ

– EPIC ಸಂಖ್ಯೆ ಅಥವಾ ಫಾರ್ಮ್ ಉಲ್ಲೇಖ ಸಂಖ್ಯೆಯನ್ನು ನಮೂದಿಸಿ

– ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಅನ್ನು ಪರಿಶೀಲಿಸಿ

– ಡೌನ್‌ಲೋಡ್ e-EPIC ಮೇಲೆ ಕ್ಲಿಕ್ ಮಾಡಿ

ಇ-ಎಪಿಕ್‌ ಕಾರ್ಡ್ ಡಿಜಿಟಲ್ ಸ್ವರೂಪದಲ್ಲಿ ಚುನಾವಣಾ ಫೋಟೋ ಗುರುತಿನ ಚೀಟಿಯನ್ನು ಪಡೆಯುವ ಪರ್ಯಾಯ ಮತ್ತು ಕ್ಷಿಪ್ರವಾದ ಮಾದರಿಯಾಗಿದೆ. ಇದು ಮತದಾರರ ಗುರುತಿನ ದಾಖಲೆಯ ಪುರಾವೆಯಾಗಿ ಸಮಾನವಾಗಿ ಮಾನ್ಯವಾಗಿರುತ್ತದೆ. ಪಿಡಿಎಫ್ ಫೈಲ್ ಅನ್ನು ಮತದಾರರ ಅನುಕೂಲಕ್ಕೆ ತಕ್ಕಂತೆ ಮುದ್ರಿಸಬಹುದು ಮತ್ತು ಮತದಾನದ ಸಮಯದಲ್ಲಿ ಮತದಾರರು ಅದನ್ನು ಪುರಾವೆಯಾಗಿ ತರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...