alex Certify ‌ʼಆಂಡ್ರಾಯ್ಡ್ʼ ಫೋನ್‌‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಆಂಡ್ರಾಯ್ಡ್ʼ ಫೋನ್‌‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಬ್ಯಾಟರಿ ಬಾಳಕೆಯದ್ದೇ ಚಿಂತೆ. ಅದರಲ್ಲೂ ಆಂಡ್ರಾಯ್ಡ್ ಬಳಕೆದಾರರು, ಮೊಬೈಲ್ ವರ್ಷ ಕಳೆದಂತೆ ಬ್ಯಾಟರಿ ಬಾಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಾಮಾನ್ಯ.

ಆದರೆ, ನೀವು ಚಿಂತಿಸಬೇಕಾಗಿಲ್ಲ. ಫೋನ್‌ನ ಬ್ಯಾಟರಿ ಹೆಲ್ತ್ ಅಥವಾ ಫೋನ್‌ನ ಬ್ಯಾಟರಿ ಅವಧಿಯನ್ನು ಸುಧಾರಿಸಲು ಮಾರ್ಗಗಳಿವೆ ಮತ್ತು ಬ್ಯಾಟರಿ ಸ್ಥಿತಿಗತಿ ಹೇಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸಬಹುದಾದ ಮಾರ್ಗಗಳಿವೆ.

ಎಲ್ಲಾ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯ ಸ್ಥಿತಿಗತಿ ಅಥವಾ ಅದರ ಟೆಂಪ್ರೇಚರ್ ಪರಿಶೀಲಿಸುವ ಆಯ್ಕೆಯನ್ನು ಹೊಂದಿರುವುದಿಲ್ಲ. ಆದ್ದರಿಂದ, ಬಳಕೆದಾರರು ಥರ್ಡ್ ಪಾರ್ಟಿ ಸೇವೆ ಅವಲಂಬಿಸಬೇಕಾಗುತ್ತದೆ.

ಸ್ಯಾಮ್‌ಸಂಗ್ ನಂತಹ ಬ್ರ್ಯಾಂಡ್‌ಗಳು ಫೋನ್‌ನ ಬ್ಯಾಟರಿ ಹೆಲ್ತ್ ಕುರಿತು ಕೆಲವು ವಿವರ ಪಡೆಯಲು ಆಯ್ಕೆಯನ್ನು ನೀಡುತ್ತವೆ.

ಉಳಿದಂತೆ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಹೆಚ್ಚಿನ ಅಂಶ ತಿಳಿದುಕೊಳ್ಳಬಹುದು. AccuBattery ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಬಳಕೆದಾರರು ತಮ್ಮ ಫೋನ್‌ನ ಬ್ಯಾಟರಿ ಕೇವಲ 80 ಪ್ರತಿಶತದವರೆಗೆ ಮಾತ್ರ ಚಾರ್ಜ್ ಮಾಡುವಂತೆ ಸೇವೆ ನೀಡುತ್ತದೆ‌. (ಬ್ಯಾಟರಿಯ ದೀರ್ಘಾಯುಷ್ಯಕ್ಕೆ ಉತ್ತಮವಲ್ಲದ ಕಾರಣ ತಮ್ಮ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಾರದು ಎಂದು ಹೇಳಲಾಗುತ್ತದೆ)

ಈ ಅಪ್ಲಿಕೇಶನ್ ನೋಟಿಫಿಕೇಶನ್ ವ್ಯವಸ್ಥೆ ಹೊಂದಿದ್ದು ಅದು ಚಾರ್ಜಿಂಗ್ ಮಟ್ಟವು 80 ಪ್ರತಿಶತವನ್ನು ತಲುಪಿದಾಗ ಅಲಾರಂ‌ ಬಡಿದುಕೊಳ್ಳುತ್ತದೆ. ನಂತರ ಚಾರ್ಜರ್ ಅನ್ನು ಅನ್‌ಪ್ಲಗ್ ಮಾಡಬಹುದು.

ಈ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ನ ಟೆಂಪ್ರೇಚರ್ ಸಹ ತೋರಿಸುತ್ತದೆ. ಇದರಿಂದ ಗೇಮಿಂಗ್ ಸಂದರ್ಭದಲ್ಲಿ, ಚಾರ್ಜಿಂಗ್‌ನಲ್ಲಿ ಇರಿಸಿಕೊಳ್ಳಲು ಅವಕಾಶವಾಗಲಿದೆ. ಫೋನ್‌ನ ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರುತ್ತದೆ ಎಂದು ಖಚಿತಪಡಿಸಿಕೊಂಡರಾಯಿತು.

ಚಾರ್ಜ್ ಮಾಡಲು ಎಷ್ಟು ಸಮಯ ತೆಗೆದುಕೊಂಡಿತು ಎಂಬ ವಿವರಗಳನ್ನು ಪಡೆಯಬಹುದು‌. ಚಾರ್ಜಿಂಗ್ ವೇಗ, ಚಾರ್ಜ್ ಸಮಯದ ಅಂದಾಜು, ಚಾರ್ಜ್ ಸ್ಥಿತಿ, ಸೇರಿ ಅನೇಕ ವಿವರಗಳೂ ಸಿಗಲಿವೆ.

ಇವೆಲ್ಲವೂ ಫೋನ್‌ನ ಬ್ಯಾಟರಿ ಹೆಲ್ತ್ ಮತ್ತು ಕಂಡೀಷನ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ, ಇದು ದೀರ್ಘಾವಧಿಯಲ್ಲಿ ಬ್ಯಾಟರಿ ಅವಧಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಡೀಪ್ ಸ್ಲೀಪ್ ವೈಶಿಷ್ಟ್ಯವೂ ಇದೆ. ಫೋನ್ ಅನ್ನು ಸ್ವಲ್ಪ ಸಮಯದವರೆಗೆ ಬಳಸದಿದ್ದಾಗ ಫೋನ್ ಡೀಪ್ ಸ್ಲೀಪ್ ಮೋಡ್‌ಗೆ ಪ್ರವೇಶಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...