alex Certify ಸಂಗಾತಿ ದುಃಖದಲ್ಲಿದ್ದರೆ ಅವರ ʼಮೂಡ್‌ʼ ಬದಲಾಯಿಸುವುದು ಹೇಗೆ…? ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿ ದುಃಖದಲ್ಲಿದ್ದರೆ ಅವರ ʼಮೂಡ್‌ʼ ಬದಲಾಯಿಸುವುದು ಹೇಗೆ…? ಇಲ್ಲಿದೆ ಸಲಹೆ

ಪ್ರೀತಿ ಮತ್ತು ದಾಂಪತ್ಯದಲ್ಲಿ ಸಂತೋಷವೇ ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಹೆಚ್ಚು. ಮದುವೆಯಾದ ಹೊಸದರಲ್ಲಿ ಪತಿ-ಪತ್ನಿ ಬಹಳ ಖುಷಿಯಾಗಿರುತ್ತಾರೆ. ಆದರೆ ದಿನಗಳು ಕಳೆದಂತೆ ನಿರಾಸೆ, ದುಃಖ ಹೀಗೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಸಂಗಾತಿಗಳ ಮನಸ್ಥಿತಿಯಲ್ಲಿ ಬದಲಾವಣೆಗಳಾಗಬಹುದು. ಪರಸ್ಪರರಲ್ಲಿ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಅಂತಹ ಕೆಲವು ಸಂದರ್ಭಗಳಲ್ಲಿ ಕೆಲವು ಸರಳ ತಂತ್ರಗಳ ಮೂಲಕ ಸಂಗಾತಿಗಳ ಬೇಸರವನ್ನು ದೂರ ಮಾಡಬಹುದು.

ಹೊಗಳಿಕೆ – ಹೊಗಳಿಕೆ ಯಾರಿಗೆ ಇಷ್ಟವಿಲ್ಲ ಹೇಳಿ ? ಪ್ರಶಂಸೆ ಮಾಡಿದರೆ ಸಂಗಾತಿಯ ಮುಖದಲ್ಲಿ ನಗು ಮೂಡುತ್ತದೆ. ಅವರ ನೋಟ, ನಡವಳಿಕೆ, ಬಟ್ಟೆ, ಮಾತನಾಡುವ ಶೈಲಿ ಹೀಗೆ ಅನೇಕ ವಿಚಾರಗಳಲ್ಲಿ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಹೊಗಳಿಕೆ ಎರಡೇ ನಿಮಿಷಗಳಲ್ಲಿ ಮನಸ್ಥಿತಿಯನ್ನು ಬದಲಾಯಿಸುತ್ತದೆ.

ಸಮಸ್ಯೆ ಅರ್ಥಮಾಡಿಕೊಳ್ಳಿ – ಸಮಸ್ಯೆಗಳನ್ನು ಅರ್ಥಮಾಡಿಕೊಂಡರೆ ಭಾವನಾತ್ಮಕವಾಗಿ ಅವರನ್ನು ಬಲಪಡಿಸಬಹುದು. ಸಂಗಾತಿ ನಿರಾಸೆಯಲ್ಲಿದ್ದರೆ ಸದಾ ಅವರ ಜೊತೆಗಿರಿ. ಎಲ್ಲಾ ಪರಿಸ್ಥಿತಿಯಲ್ಲೂ ಅವರನ್ನು ಬೆಂಬಲಿಸುತ್ತೀರಿ ಎಂಬುದನ್ನು ಖಚಿತಪಡಿಸಿ.

ನೆಚ್ಚಿನ ಆಹಾರ – ಮನುಷ್ಯನ ಹೃದಯ ಹೊಟ್ಟೆಯಲ್ಲಿದೆ ಎಂಬ ಮಾತಿದೆ. ಹೀಗಾಗಿ ಸಂಗಾತಿ ದುಃಖದಲ್ಲಿದ್ದರೆ ಅಥವಾ ಚಿಂತೆ ಮಾಡುತ್ತಿದ್ದರೆ ಅವರ ನೆಚ್ಚಿನ ಆಹಾರವನ್ನು ತಯಾರಿಸಿ ಬಡಿಸಿ. ಒಟ್ಟಿಗೆ ಕುಳಿತು ತಿನ್ನಿರಿ.

ಧನ್ಯವಾದ ಹೇಳುವುದು – ಸಾಮಾನ್ಯವಾಗಿ ಒಟ್ಟಿಗೆ ವಾಸಿಸುವಾಗ  ನಾವು ತುಂಬಾ ಹತ್ತಿರವಾಗುತ್ತೇವೆ. ಆದರೆ ಪರಸ್ಪರ ಧನ್ಯವಾದ ಹೇಳುವುದನ್ನು ನಿಲ್ಲಿಸುತ್ತೇವೆ. ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಖುಷಿಯಾಗಿರಬೇಕೆಂದರೆ ಪ್ರಶಂಸಿಸುವುದು ಮತ್ತು ಅವರ ಎಲ್ಲಾ ಪ್ರಯತ್ನಗಳಿಗೆ ಕೃತಜ್ಞತೆ ಅರ್ಪಿಸುವುದನ್ನು ಮರೆಯಬಾರದು. ಸಂಗಾತಿಗೆ ಧನ್ಯವಾದ ಹೇಳಿ. ಅವರ ಜೊತೆಗಿರುವುದನ್ನು ಎಷ್ಟು ಇಷ್ಟಪಡುತ್ತೀರಿ ಎಂಬುದನ್ನು ಖಚಿತಪಡಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...