alex Certify ಹಾವಿನ ಬಾಲ ಎಳೆಯಲು ಹೋದಾಗ ಕಾದಿತ್ತು ಶಾಕ್; ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನ ಬಾಲ ಎಳೆಯಲು ಹೋದಾಗ ಕಾದಿತ್ತು ಶಾಕ್; ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ

ಹಾವುಗಳನ್ನು ರಕ್ಷಣೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಎಂಟೆದೆ ಇದ್ದವರ ಕೈಲಿ ಮಾತ್ರ ಆಗುವಂತಹ ಕೆಲಸವಿದು ಅಂದರೆ ತಪ್ಪಾಗಲಾರದು. ಉರಗ ತಜ್ಞರು ಕೂಡ ಹಾವನ್ನು ಹಿಡಿಯುವ ವೇಳೆ ಎಷ್ಟು ಎಚ್ಚರವಾಗಿದ್ದರೂ ಸಹ ಕಡಿಮೆಯೇ..! ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹಾವಿನ ಬಾಲ ಹಿಡಿದು ಎಳೆಯಲು ಹೋದ ಉರಗ ತಜ್ಞರೊಬ್ಬರು ಸೆಕೆಂಡ್​ಗಳ ಅಂತರದಲ್ಲಿ ಹಾವಿನ ದಾಳಿಯಿಂದ ಪಾರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಂಬಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗೋಪಾಲ ಕೃಷ್ಣ ಭಟ್​ ಎಂಬವರ ಮನೆಯ ಸ್ನಾನಗೃಹದಲ್ಲಿ ನಾಗರ ಹಾವು ಸೇರಿಕೊಂಡಿತ್ತು. ಈ ಹಾವನ್ನು ರಕ್ಷಣೆ ಮಾಡಲು ಉರಗ ತಜ್ಞ ಅಶೋಕ್​ ಎಂಬವರು ಬಂದಿದ್ದರು.

ಹಾವಿನ ಬಾಲವನ್ನು ಹಿಡಿದು ಅದನ್ನು ಹೊರಗೆ ಎಳೆಯುವುದು ಅಶೋಕ್​ರ ಪ್ಲಾನ್​ ಆಗಿತ್ತು. ಆದರೆ ಬರೋಬ್ಬರಿ 14 ಅಡಿ ಉದ್ದ ಇದ್ದ ಈ ಕಾಳಿಂಗ ಸರ್ಪ ಬಾಲ ಎಳೆಯುತ್ತಿದ್ದಂತೆಯೇ ಬುಸ್​ ಎಂದು ಹೆಡೆಯೆತ್ತಿ ನಿಂತಿದೆ. ಗಾಬರಿಗೊಂಡ ಅಶೋಕ್​ ಅದೃಷ್ಟವಶಾತ್​ ಹಾವಿನಿಂದ ಕಚ್ಚಿಸಿಕೊಳ್ಳದೇ ಪಾರಾಗಿದ್ದಾರೆ.

ಹಾವನ್ನು ಈ ರೀತಿಯೆಲ್ಲ ಹಿಡಿಯಲೇಬಾರದು….. ಅದರಲ್ಲೂ ಕಾಳಿಂಗ ಸರ್ಪವನ್ನು ಎಂದು ಈ ವಿಡಿಯೋಗೆ ಅರಣ್ಯ ಸೇವಾ ಅಧಿಕಾರ್​ ಪರ್ವೀನ್​ ಕಸ್ವಾನ್​ ಸೋಶಿಯಲ್​ ಮೀಡಿಯಾದಲ್ಲಿ ಹೇಳಿದ್ದಾರೆ. ಇನ್ನೊಬ್ಬರು ಬಾಲ ನೋಡಿ ಎಂದಿಗೂ ಹಾವನ್ನು ಅಳೆಯಬೇಡಿ ಎಂದು ಟ್ವಿಟರ್​ನಲ್ಲಿ ಶೀರ್ಷಿಕೆ ನೀಡಿದ್ದಾರೆ.

— Jude David (@judedavid21) September 6, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...