alex Certify ಶಿಕ್ಷಣ ಸಾಲ ಪಡೆದು ಕಂತು ತೀರಿಸುತ್ತಿಲ್ಲವೇ……? ಹಾಗಿದ್ದಲ್ಲಿ ನಿಮಗೆ ಕಾದಿದೆ ದೊಡ್ಡ ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣ ಸಾಲ ಪಡೆದು ಕಂತು ತೀರಿಸುತ್ತಿಲ್ಲವೇ……? ಹಾಗಿದ್ದಲ್ಲಿ ನಿಮಗೆ ಕಾದಿದೆ ದೊಡ್ಡ ಸಂಕಷ್ಟ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂಬ ಆಶಯ ಸಾಮಾನ್ಯವಾಗಿ ಎಲ್ಲಾ ಪೋಷಕರಿಗೂ ಇರುತ್ತದೆ. ಮಕ್ಕಳ ಈ ಆಶಯವನ್ನು ಪೂರೈಸಲು ಪೋಷಕರು ಶಿಕ್ಷಣ ಸಾಲದತ್ತ ಮುಖ ಮಾಡುತ್ತಿದ್ದಾರೆ ಎಂದು ಬ್ಯಾಂಕ್​ಬಜಾರ್​​ ಆಸ್ಪಿರೇಷನ್​ ಸೂಚ್ಯಂಕ 2022ರಲ್ಲಿ ತಿಳಿದು ಬಂದಿದೆ. ಇತರೆ ಸಾಲಗಳಂತೆ ಶಿಕ್ಷಣ ಸಾಲದ ಸೇವೆಯೂ ಕೂಡ ಸಾಲಗಾರನಿಂದ ದೃಢವಾದ ಹಣಕಾಸು ಯೋಜನೆಯನ್ನು ನಿರೀಕ್ಷೆ ಮಾಡುತ್ತದೆ. ಹೀಗಾಗಿ ನೀವು ಈ ಸಾಲವನ್ನು ಹಗುರವಾಗಿ ತೆಗೆದುಕೊಂಡು ಕಂತು ಸರಿಯಾಗಿ ಕಟ್ಟದೇ ಹೋದಲ್ಲಿ ನಿಮ್ಮ ಭವಿಷ್ಯದ ಹಣಕಾಸಿನ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಬಹುದು. ಶಿಕ್ಷಣ ಸಾಲಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಶಿಕ್ಷಣ ಸಾಲವು ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸಿಗುವ ಸಾಲ ಸೌಲಭ್ಯವಾಗಿದೆ. ವಿದ್ಯಾರ್ಥಿಗಳ ಪುಸ್ತಕ, ವಸತಿ, ಸಾರಿಗೆ ಕಾಲೇಜು ಶುಲ್ಕ ಹೀಗೆ ಎಲ್ಲಾ ಶೈಕ್ಷಣಿಕ ವೆಚ್ಚವನ್ನು ನಿಭಾಯಿಸಲು ಅನೇಕರು ಶೈಕ್ಷಣಿಕ ಸಾಲದ ಮೊರೆ ಹೋಗುತ್ತಾರೆ. ವಿದ್ಯಾರ್ಥಿ ಸಾಲ ಇತರೆ ಸಾಲಗಳಂತೆ ಮೇಲ್ನೋಟಕ್ಕೆ ಕಂಡರೂ ಸಹ ಮರುಪಾವತಿ ವಿಚಾರದಲ್ಲಿ ಈ ಸಾಲವು ಇತರೆ ಸಾಲಗಳಿಗಿಂತ ಭಿನ್ನವಾಗಿದೆ. ವಿದ್ಯಾರ್ಥಿಗಳು ಕೋರ್ಸ್​ ಪೂರ್ಣಗೊಳಿಸಿದ ಬಳಿಕ ಸಾಲ ಮರುಪಾವತಿ ಮಾಡಲು ಆರರಿಂದ 12 ತಿಂಗಳುಗಳ ಕಾಲ ಸಮಯಾವಕಾಶ ಕೇಳಲು ಅವಕಾಶ ಇರುತ್ತದೆ.

ಒಂದು ವೇಳೆ ನಿಮಗೆ ಶಿಕ್ಷಣ ಸಾಲದ ಇಎಂಐಗಳನ್ನು ಸರಿಯಾದ ಸಮಯಕ್ಕೆ ಕಟ್ಟಲು ಸಾಧ್ಯವಾಗದೇ ಹೋದಲ್ಲಿ ಬ್ಯಾಂಕ್​ ನಿಮ್ಮ ಡೀಫಾಲ್ಟರ್​​​ ಎಂದು ಪರಿಗಣಿಸುತ್ತದೆ. ಸೂಚಿಸಿದ ಗಡುವಿನ ಒಳಗಾಗಿ ನಿಮಗೆ ಕಂತುಗಳನ್ನು ಕಟ್ಟುವಂತೆ ಸೂಚನೆ ನೀಡುತ್ತದೆ. ಆದರೆ ಯಾವಾಗ ನಿಮ್ಮನ್ನು ಬ್ಯಾಂಕ್​ ಡೀಫಾಲ್ಟರ್​ ಎಂದು ಪರಿಗಣಿಸುತ್ತದೆಯೋ ನಿಮ್ಮ ಕ್ರೆಡಿಟ್​ ಸ್ಕೋರ್​​ರ ಇದು ತೀವ್ರವಾಗಿ ಪ್ರತಿಕೂಲ ಪರಿಣಾಮ ಬೀರಬಹುದು. ಹೊಸ ಸಾಲಗಳನ್ನು ಸ್ವೀಕರಿಸಲು ನಿಮಗೆ ತುಂಬಾನೇ ಸಂಕಷ್ಟ ಎದುರಾಗಲಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಇಎಂಐಗಳನ್ನು ಪಾವತಿ ಮಾಡಿ.

ನೀವು ಶಿಕ್ಷಣ ಸಾಲವನ್ನು ಪಡೆಯುವಾಗ ಯಾರಾದರೂ ಗ್ಯಾರಂಟಿದಾರರಾಗಿ ಸಹಿ ಹಾಕಿದ್ದರೆ ಅವರಿಗೂ ಸಂಕಷ್ಟ ಎದುರಾಗಲಿದೆ. ನಿಮ್ಮನ್ನು ಬ್ಯಾಂಕ್​​ ಡೀಫಾಲ್ಟರ್​ ಎಂದು ಪರಿಗಣಿಸಿದ ಬಳಿಕ ಬ್ಯಾಂಕ್​ ಸಾಲಕ್ಕೆ ಗ್ಯಾರಂಟಿ ಹಾಕಿದ ವ್ಯಕ್ತಿಯನ್ನು ಸಂಪರ್ಕಿಸುತ್ತದೆ. ಜಾಮೀನುದಾರರಿಗೂ ಈ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಹೋದಲ್ಲಿ ಭವಿಷ್ಯದಲ್ಲಿ ಸಾಲ ಪಡೆಯಲು ಇಬ್ಬರಿಗೂ ಅಡ್ಡಿಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...