alex Certify Big Shocking News: 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ 15 ವರ್ಷದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big Shocking News: 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ 15 ವರ್ಷದ ಬಾಲಕ

ಆಘಾತಕಾರಿ ಘಟನೆಯೊಂದರಲ್ಲಿ 15 ವರ್ಷದ ಬಾಲಕನೊಬ್ಬ 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದು, ಇದೀಗ ಬಾಲ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇಂಥದೊಂದು ಘಟನೆ ಡೆಹ್ರಾಡೂನ್ ನ ಪಂಚತಾರಾ ಹೋಟೆಲಿನಲ್ಲಿ ಭಾನುವಾರದಂದು ನಡೆದಿದ್ದು, ಛತ್ತಿಸ್ಗಢ ಮೂಲದ ಬಾಲಕ ತನ್ನ ಕುಟುಂಬದೊಂದಿಗೆ ಈ ಹೋಟೆಲ್ ನಲ್ಲಿ ತಂಗಿದ್ದ.

ಸಂತ್ರಸ್ತೆ ಇದೇ ಹೋಟೆಲ್ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಆಕೆ ಮಹಿಳಾ ಶೌಚಾಲಯಕ್ಕೆ ಹೋದ ವೇಳೆ ಹಿಂದಿನಿಂದ ಬಂದ ಬಾಲಕ ದಿಢೀರನೆ ಬಾಗಿಲು ಹಾಕಿ ಅಲ್ಲಿಯೇ ಅತ್ಯಾಚಾರವೆಸಗಿದ್ದಾನೆ.

ಇದೀಗ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಬಾಲ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...