alex Certify ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ

ಜೈಪುರ್: ರಾಜಸ್ಥಾನದ ಜೈಪುರ್ ದಲ್ಲಿ ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಯಾಗಿರುವ ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ.

36 ವರ್ಷದ ಅರ್ಚಕನಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ದೂರು ನೀಡಿರುವ ಸಂತ್ರಸ್ಥೆ ಭಾನುವಾರ ಪೂಜೆಗಾಗಿ ಜೈಚಂದ್ ಪುರ ಹಳ್ಳಿಯ ಸಮೀಪದ ದೇವಸ್ಥಾನಕ್ಕೆ ಹೋಗಿದ್ದಳು. ಮಹಿಳೆಯ ಪತಿ ಮತ್ತು ತಂದೆ ಕೂಡ ಆಕೆಯೊಂದಿಗೆ ಇದ್ದರು. ಮಹಿಳೆಯ ಪತಿ ಮತ್ತು ತಂದೆಯನ್ನು ಕೆಲವು ಕೆಲಸಕ್ಕಾಗಿ ಅರ್ಚಕ ಹೊರಗೆ ಕಳುಹಿಸಿದ್ದಾನೆ.

ತಂದೆ ಮತ್ತು ಪತಿ ಹೋದ ನಂತರ, ಆರೋಪಿ ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಿಗ್ಗೆ ಆರೋಪಿ ಮಹಿಳೆಯನ್ನು ತನ್ನ ಕಾರಿನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದನು. ಮಹಿಳೆ ಮನೆಗೆ ತಲುಪಿದ ನಂತರ ತನ್ನ ಕಷ್ಟವನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡಳು.

ಘಟನೆಯ ನಂತರ ಕೋಪಗೊಂಡ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರೂ ಅರ್ಚಕ ಪರಾರಿಯಾಗಿದ್ದಾನೆ. ಮಹಿಳೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪೊಲೀಸರು ವಿಶೇಷ ತಂಡವನ್ನು ರಚಿಸಿ ಹತ್ತಿರದ ಪ್ರದೇಶಗಳಲ್ಲಿರುವ ಅಲ್ವಾರ್, ಸಿಕಾರ್ ಗ್ರಾಮಗಳಲ್ಲಿ ಶೋಧ ನಡೆಸಿದ್ದಾರೆ.

ಆರೋಪಿ ವಿರಾಟ್ ನಗರದ ಬೆಟ್ಟಗಳ ಮೇಲಿರುವ ಸಣ್ಣ ದೇವಸ್ಥಾನದಲ್ಲಿ ಅಡಗಿಕೊಂಡಿದ್ದ. ಮಾಹಿತಿ ತಿಳಿದ  ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದ್ದು, ದೂರುದಾರರ ಹೇಳಿಕೆ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...