alex Certify ಹೋಂಡಾ ಕಂಪನಿಯ ಹೊಸ ವಿನ್ಯಾಸದ ಬೈಕ್​​ ಮಾರುಕಟ್ಟೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಂಡಾ ಕಂಪನಿಯ ಹೊಸ ವಿನ್ಯಾಸದ ಬೈಕ್​​ ಮಾರುಕಟ್ಟೆಗೆ

ಹೋಂಡಾ ಮೋಟಾರ್​ ಸೈಕಲ್​ ಹಾಗೂ ಸ್ಕೂಟರ್​ ಭಾರತದಲ್ಲಿ ನ್ಯೂ ಹೋಂಡಾ ಸಿಬಿ 350ಆರ್​ಎಸ್​ನ್ನು ಲಾಂಚ್​ ಮಾಡೋದಾಗಿ ಘೋಷಣೆ ಮಾಡಿದೆ. ಹಾಗೂ ಭಾರತದಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 1.96 ಲಕ್ಷ ರೂಪಾಯಿ ಇದೆ ಎಂದು ಕಂಪನಿ ತಿಳಿಸಿದೆ.

ಹೋಂಡಾ ಸಿಬಿ 350ಆರ್​ಎಸ್​ ಕಳೆದ ವರ್ಷ ಬಿಡುಗಡೆಯಾದ ಸಿಬಿ 350ಯ ಮಾದರಿಯನ್ನೇ ಹೊಂದಿದೆ. ಆದರೆ ಕೆಲ ಮಾರ್ಪಾಡುಗಳನ್ನ ಮಾಡಲಾಗಿದೆ. ಸೈಡ್​ ಪ್ಯಾನೆಲ್​, ಫ್ರಂಟ್​ ಹಾಗೂ ರಿಯರ್​ ಫೆಂಡರ್​, ಹೆಡ್​ಲ್ಯಾಂಪ್​, ಹಾರ್ನ್ ಹೀಗೆ ಅನೇಕ ಭಾಗಗಳನ್ನ ಕಪ್ಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.

ಇನ್ನು ಹೊಸ ಎಲ್​ಇಡಿ ಟೈಲ್​ ಲ್ಯಾಂಪ್​ ವಿನ್ಯಾಸ, ಎಲ್​ಇಡಿ ಸೂಚಕ, ಇಂಜಿನ್​ ಅಡಿಯಲ್ಲಿ ಹೊಸ ಸ್ಕಿಡ್​ ಪ್ಲೇಟ್​, ಸಿಬಿ 350 ಫ್ರಂಟ್​ ಫೋರ್ಕ್​ ಗೇಟರ್​ಗಳು ಹಾಗೂ ಆಸನವನ್ನ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.

ಈಗಾಗಲೇ ಈ ಹೊಸ ಬೈಕ್​​ಗೆ ಬುಕ್ಕಿಂಗ್​ ಪ್ರಾರಂಭವಾಗಿದೆ. 2021ರ ಮಾರ್ಚ್​ ಮಧ್ಯದಿಂದ ವಿತರಣೆ ಪ್ರಕ್ರಿಯೆ ಶುರು ಮಾಡುವ ನಿರೀಕ್ಷೆ ಇದೆ. ಸಿಬಿ 350 ಆರ್​ ಎಸ್​​ ರೇಡಿಯಂಟ್ ರೆಡ್ ಮೆಟಾಲಿಕ್ ಮತ್ತು ಬ್ಲ್ಯಾಕ್ ವಿತ್ ಪರ್ಲ್ ಸ್ಪೋರ್ಟ್ಸ್ ಹಳದಿ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...