alex Certify ಬಾಲಿವುಡ್ ದಂತಕತೆ ದೇವ್ ​ಆನಂದ್​ 100ನೇ ಜನ್ಮವಾರ್ಷಿಕೋತ್ಸವ; ಅಪರೂಪದ ಫೋಟೋ ಶೇರ್​ ಮಾಡಿದ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ದಂತಕತೆ ದೇವ್ ​ಆನಂದ್​ 100ನೇ ಜನ್ಮವಾರ್ಷಿಕೋತ್ಸವ; ಅಪರೂಪದ ಫೋಟೋ ಶೇರ್​ ಮಾಡಿದ ಪ್ರಧಾನಿ

ಭಾರತೀಯ ಚಿತ್ರರಂಗ ಕಂಡಿದ್ದ ಅಪ್ರತಿಮ ನಟ ದೇವ್​ ಆನಂದ್​​ರ 100ನೇ ವರ್ಷದ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಖ್ಯಾತ ನಟನನ್ನು ನೆನೆದಿದ್ದಾರೆ. ಪ್ರಧಾನಿ ಮೋದಿ ಖ್ಯಾತ ನಟ ದೇವ ಆನಂದ್​ರ ಜೊತೆ ಇರುವ ಕೆಲವೊಂದು ಫೋಟೋಗಳನ್ನು ಎಕ್ಸ್​ನಲ್ಲಿ ಶೇರ್​ ಮಾಡಿದ್ದಾರೆ.

ಅವರ ಕತೆ ಹೇಳುವ ನೈಪುಣ್ಯತೆ ಹಾಗೂ ಸಿನಿಮಾ ಬಗ್ಗೆ ಇದ್ದ ಒಲವಿಗೆ ಬೇರೆ ಯಾವುದೇ ಸಾಟಿಯಿಲ್ಲ. ಅವರ ಸಿನಿಮಾಗಳು ಮನರಂಜನೆಯು ಮಾತ್ರವಲ್ಲದೇ ಬದಲಾಗುತ್ತಿರವ ಭಾರತೀಯ ಸಮಾಜ ಹಾಗೂ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವಂತೆ ಇದ್ದವು ಎಂದು ಟ್ವೀಟ್​ ಮಾಡಿದ್ದಾರೆ.

ದೇವ್​ ಆನಂದ್​ ಕೇವಲ ನಟ ಮಾತ್ರವಲ್ಲದೇ ಬಾಲಿವುಡ್​ ಜಗತ್ತಿನ ಹೆಸರಾಂತ ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕನ ಕೆಲಸ ಕೂಡ ಮಾಡಿ ಸೈ ಎನಿಸಿದ್ದಾರೆ.

ದೇವ್​ ಆನಂದ್​ 1923ರ ಸೆಪ್ಟೆಂಬರ್​ 25ರಂದು ಜನಿಸಿದ್ದರು. ಬಾಲಿವುಡ್​ ಸಿನಿಮಾದ ಅತ್ಯಂತ ಯಶಸ್ವಿ ನಟರ ಪೈಕಿ ದೇವ್​ ಆನಂದ್​ ಕೂಡ ಒಬ್ಬರು. ಆರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ನಟ ದೇವ್​ ಆನಂದ್​ ಗೈಡ್​, ಟ್ಯಾಕ್ಸಿ ಡ್ರೈವರ್​, ಜ್ಯುವೆಲ್​ ಥೀಫ್​​ ಹಾಗೂ ಸಿಐಡಿಯಂತಹ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಜಾಲ್​ ಸಿನಿಮಾದಲ್ಲಿ ಕಳ್ಳ ಸಾಗಾಣಿಕೆದಾರನಾಗಿ, ದುಷ್ಮನ್​ ಸಿನಿಮಾದಲ್ಲಿ ತಲೆಮರೆಸಿಕೊಂಡ ಗ್ಯಾಂಗ್​ ಸದಸ್ಯನಾಗಿ, ಕಾಲಾ ಬಜಾರ್​​ನಲ್ಲಿ ಬ್ಲಾಕ್​ ಮಾರ್ಕೆಟ್​​ ಸದಸ್ಯನಾಗಿ ಹಾಗೂ ಬಾಂಬೆ ಕಾ ಬಾಬು ಸಿನಿಮಾದಲ್ಲಿ ಕೊಲೆಗಾರನಾಗಿ ನಟಿಸಿದ್ದಾರೆ.

ಭಾರತದ ಮೂರನೇ ಅತ್ಯನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸ್ವೀಕರಿಸಿದ್ದ ದೇವ್​ ಆನಂದ್​​ ತಮ್ಮ 88ನೇ ವಯಸ್ಸಿನಲ್ಲಿ ಲಂಡನ್​ನ ವಾಷಿಂಗ್ಟನ್​​ ಮೇಫೇರ್​ ಹೋಟೆಲ್​ನಲ್ಲಿ ಕೊನೆಯುಸಿರೆಳೆದಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...