alex Certify ಮದುವೆ ಅಂದ್ರೆ ಈಕೆಗೆ ಬಲು ಪ್ರೀತಿ…..! ಹನ್ನೊಂದು ಬಾರಿ ಮದುವೆಯಾದ್ರೂ ಅಂತ್ಯವಾಗದ ಆಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಅಂದ್ರೆ ಈಕೆಗೆ ಬಲು ಪ್ರೀತಿ…..! ಹನ್ನೊಂದು ಬಾರಿ ಮದುವೆಯಾದ್ರೂ ಅಂತ್ಯವಾಗದ ಆಸೆ

ಭಾರತದಲ್ಲಿ ಮದುವೆ ಜೀವನದ ಮಹತ್ವದ ಘಟ್ಟ. ವಿಚ್ಛೇದನದ ಸಂಖ್ಯೆ ಕೂಡ ಭಾರತದಲ್ಲಿ ಕಡಿಮೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ಮದುವೆ ವಿಷ್ಯದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ. 52 ವರ್ಷದ ಮಹಿಳೆ ಈವರೆಗೆ 11 ಮದುವೆಯಾಗಿದ್ದಾಳೆ.

ಯಸ್, ಮೋನೆಟ್ ಹೆಸರಿನ ಮಹಿಳೆಗೆ ಈಗ 52 ವರ್ಷ. ಮಹಿಳೆ 9 ಪುರುಷರನ್ನು 11 ಬಾರಿ ಮದುವೆಯಾಗಿದ್ದಾಳೆ. ಬಾಲ್ಯದಿಂದಲೇ ಮೋನೆಟ್ ಗೆ ಪುರುಷರ ಮೇಲೆ ವಿಶೇಷ ಆಕರ್ಷಣೆಯಿತ್ತಂತೆ. ಆಕೆ ತನ್ನ ಅಣ್ಣನ ಸ್ನೇಹಿತರ ಮೇಲೆ ಕಣ್ಣು ಹಾಕಿದ್ದಳಂತೆ. ಅವರನ್ನು ಮದುವೆಯಾಗುವ ಕನಸು ಕಂಡಿದ್ದಳಂತೆ.

ಹೈಸ್ಕೂಲ್ ಮುಗಿಯುತ್ತಿದ್ದಂತೆ ಆಕೆ ಮೊದಲ ಮದುವೆಯಾಗಿದ್ದಾಳೆ. ನಂತ್ರ 9 ಪುರುಷರ ಜೊತೆ 11 ಬಾರಿ ಮದುವೆಯಾಗಿದ್ದಾಳೆ. ಈಗ 12ನೇ ಮದುವೆಯಾಗಲು ವರನ ಹುಡುಕಾಟ ನಡೆಸುತ್ತಿದ್ದಾಳೆ. ಇಲ್ಲಿಯವರೆಗೆ 28 ​​ಜನರಿಂದ ಮದುವೆ ಪ್ರಸ್ತಾಪ ಬಂದಿದೆಯಂತೆ. ಆಕೆ ಮದುವೆ ಸಂಬಂಧ ತುಂಬಾ ದಿನ ಉಳಿಯುವುದಿಲ್ಲ. ಆದ್ರೆ ಇದ್ರ ಬಗ್ಗೆ ಮೊನೆಟ್ ಗೆ ಬೇಸರವಿಲ್ಲವಂತೆ. ಪ್ರಸ್ತುತ 57 ವರ್ಷದ ಜಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ.

ಮೋನೆಟ್, ಜಾನ್ ಜೊತೆ ಎರಡು ಬಾರಿ ಮದುವೆಯಾಗಿದ್ದಾಳೆ. ಜಾನ್ ಮತ್ತೆ ಮೊನೆಟ್ ಮದುವೆಯಾಗಲು ಬಯಸುತ್ತಾನೆ. ಜಾನ್ ಹಾಗೂ ಮೋನೆಟ್ ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದರಂತೆ. ಎರಡು ಬಾರಿ ದೂರವಾದ್ಮೇಲೂ ಜಾನ್ ನನ್ನನ್ನು ಪ್ರೀತಿ ಮಾಡ್ತಿದ್ದಾನೆ. ನಾನು ಜಾನ್ ನನ್ನೇ 12ನೇ ಬಾರಿ ಮದುವೆಯಾಗುವ ಸಾಧ್ಯತೆಯಿದೆ ಎಂದು ಮೋನೆಟ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...