alex Certify ಹಾರ ಹಾಕಲು ಅರ್ಜೆಂಟ್‌ ಮಾಡಿ ಫಜೀತಿಗೊಳಗಾದ ವಧು – ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ ಹಾಕಲು ಅರ್ಜೆಂಟ್‌ ಮಾಡಿ ಫಜೀತಿಗೊಳಗಾದ ವಧು – ವರ

ವಧು – ವರರು ವರಮಾಲೆಯನ್ನ ಬದಲಾಯಿಸಿಕೊಳ್ಳುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಧು – ವರರು ಮಾಲೆ ಬದಲಾಯಿಸಿಕೊಳ್ಳುತ್ತಿರುವ ವೇಳೆಯಲ್ಲಿ ನಡೆದ ಫನ್ನಿ ಘಟನೆಯು ನೆಟ್ಟಿಗರು ಬಿದ್ದು ಬಿದ್ದು ನಗುವಂತೆ ಮಾಡಿದೆ.

ವಿಡಿಯೋದಲ್ಲಿ ವಧು – ವರರು ವೇದಿಕೆಯಲ್ಲಿ ನಿಂತಿದ್ದರು. ಇಬ್ಬರು ವರಮಾಲೆಯನ್ನ ಬದಲಾಯಿಸಿಕೊಳ್ಳುವವರಿದ್ದರು. ಆದರೆ ವಧು ವರರು ಮಾಲೆ ಬದಲಾಯಿಸಿಕೊಳ್ಳಲು ಗಡಿಬಿಡಿ ಮಾಡಿದ ಪರಿಣಾಮ ಎರಡೂ ಮಾಲೆ ವರನ ಪೇಟಕ್ಕೆ ಸಿಕ್ಕಿಕೊಂಡಿದೆ.

ಇದನ್ನ ತಪ್ಪಿಸಲು ವಧು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಿಲ್ಲ. ಕೂಡಲೇ ವೇದಿಕೆ ಮೇಲೆ ಬಂದ ಇಬ್ಬರು ಪುರುಷರು ಈ ವರಮಾಲೆಯನ್ನ ಸರಿ ಮಾಡಿದ್ದಾರೆ . ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು 3.6 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...