alex Certify ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ ಈ ಬೆಂಚಿನ ಫೋಟೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ ಈ ಬೆಂಚಿನ ಫೋಟೋ..!

ಯಾವುದಾದರೊಂದು ಸ್ಥಳವನ್ನ ನೆನೆಸಿಕೊಂಡಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ನೆನಪಾಗ್ತಾರೆ. ಇದೇ ರೀತಿಯ ಘಟನೆಗೆ ಸಂಬಂಧಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್​ ಆಗುತ್ತಿದೆ. ಇಂಗ್ಲೆಂಡ್​​ನ ಮಾರ್ಗೆಟ್​ ಎಂಬ ನಗರದಲ್ಲಿನ ಪಾರ್ಕ್​ ಒಂದರಲ್ಲಿನ ಕಲ್ಲಿನ ಬೆಂಚಿನ ಫೋಟೋ ಇದಾಗಿದೆ.

ಈ ಬೆಂಚನ್ನ ಹೇಯ್ಡನ್​ ಕೇಯ್ಸ್ ಎಂಬ ವ್ಯಕ್ತಿಯ ಸವಿ ನೆನಪಿಗಾಗಿ ಅರ್ಪಿಸಲಾಗಿದೆ. ಆದರೆ ಇದರ ಮೇಲೆ ಬರೆದಿರುವ ಬರಹ ನೆಟ್ಟಿಗರಲ್ಲಿ ಆಶ್ಚರ್ಯವನ್ನ ಹುಟ್ಟುಹಾಕಲು ಕಾರಣವಾಗಿದೆ.

ಈ ಬೆಂಚನ್ನ ಹೇಯ್ಡನ್​ ಕೇಯ್ಸ್​ಗೆ ಅರ್ಪಿಸಲಾಗಿದೆ. ಇವರನ್ನ ಕುಟುಂಬಸ್ಥರು ಹಾಗೂ ಸ್ನೇಹಿತರು ತುಂಬಾನೆ ಮಿಸ್​ ಮಾಡಿಕೊಳ್ತಿದ್ದಾರೆ. ಅವರು ಇನ್ನೂ ಮೃತಪಟ್ಟಿಲ್ಲ. ಆದರೆ ಈಗ ಅತಿಯಾಗಿ ಆಂಟಿ ಸೋಶಿಯಲ್​ ಆಗಿದ್ದಾರೆ ಎಂದು ಬರೆಯಲಾಗಿದೆ.

ಈ ಬೆಂಚಿನ ಫೋಟೋವನ್ನ ಮೊದಲ ಬಾರಿಗೆ ರೆಡಿಟ್​ನಲ್ಲಿ ಶೇರ್​ ಮಾಡಲಾಗಿದೆ. ಇದೀಗ ಈ ಬೆಂಚಿನ ಫೊಟೋ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಅಂದರೆ ಸೋಶಿಯಲ್​ ಮೀಡಿಯಾವ ವಿವಿಧ ವೇದಿಕೆಗಳಲ್ಲೂ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...