alex Certify ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು

ತನ್ನ ಡಿಜಿಟಲ್ ಅಭಿಯಾನಗಳು ಹಾಗೂ ಕಾಂಟಾಕ್ಟ್‌ಲೆಸ್ ಗ್ರಾಹಕ ಅನುಭವಕ್ಕೆ ಇನ್ನಷ್ಟು ಬಲ ನೀಡಲು ಮುಂದಾಗಿರುವ ಹೀರೋ ಮೋಟೋಕಾರ್ಪ್‌ನ ಎಕ್ಸ್‌ಪಲ್ಸ್‌ 200 4 ವಿ ಬೈಕಿಗೆ ಬುಕಿಂಗ್ ಗವಾಕ್ಷಿಗೆ ಚಾಲನೆ ನೀಡಲಾಗಿದೆ.

ಎಕ್ಸ್‌ಪಲ್ಸ್‌ 200 4ವಿಯ ಮೊದಲ ಲಾಟ್ ಪೂರ್ತಿ ಸೋಲ್ಡ್‌ ಔಟ್ ಆದ ಬಳಿಕ ಇದೀಗ ಎರಡನೇ ಲಾಟ್‌ಗೆ ಬುಕಿಂಗ್ ಆರಂಭಿಸಿರುವುದಾಗಿ ದೇಶೀ ಉತ್ಪಾದಕ ತಿಳಿಸಿದೆ. ಬೈಕಿನ ಬೆಲೆ 1,30,150 (ಎಕ್ಸ್‌ಶೋರೂಂ) ಇದ್ದು, ಕಂಪನಿಯ ಅಧಿಕೃತ ಆನ್ಲೈನ್ ಸೇಲ್ಸ್‌ ಪೋರ್ಟಲ್‌‌ -ಇಶಾಪ್‌ನಲ್ಲಿ ಲಭ್ಯವಿದೆ.

ಪ್ರೀತಿ ಹೆಚ್ಚಾಗಿ ಮದುವೆ ಮಂಟಪದಲ್ಲೇ ಆನಂದಭಾಷ್ಪ ಹರಿಸಿದ ನವಜೋಡಿ

10,000 ರೂ.ಗಳ ಮುಂಗಡ ಪಾವತಿಯೊಂದಿಗೆ ಗ್ರಾಹಕರು ಬೈಕ್‌ಅನ್ನು ಬುಕ್ ಮಾಡಬಹುದಾಗಿದೆ. ಕೈಗೆಟುಕುವ ದರದ ಸಾಹಸ ಹಾಗೂ ಟೂರರ್‌ ಬೈಕ್ ಎನ್ನಲಾಗುವ ಎಕ್ಸ್‌ಪಲ್ಸ್‌ 200 4ವಿ, ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ — ಟ್ರೇಲ್ ಬ್ಲೂ, ಬ್ಲಿಟ್ಜ್‌ ಬ್ಲೂ ಮತ್ತು ರೆಡ್ ರೇಯ್ಡ್‌.

ಬಿಎಸ್‌ 6 ಮಾಲಿನ್ಯ ಮಾನಂದಡಗಳಡಿಯ ಇಂಜಿನ್‌ ಜೊತೆಗೆ ಬರುವ ಈ ಬೈಕ್ 200ಸಿಸಿ 4ವಾಲ್ವ್‌ ಆಯಿಲ್‌-ಲೂಲ್ಡ್‌ ಇಂಜಿನ್‌ ಹೊಂದಿದೆ. ಇದರೊಂದಿಗೆ ಲಾಂಗ್ ಸಸ್ಪೆನ್ಷನ್‌ ಟ್ರಾವೆಲ್ -190ಎಂಎಂ ಮತ್ತು 21-ಇಂಚಿನ ಗಾಲಿಯನ್ನು ಮುಂಬದಿಯಲ್ಲಿ ಹೊಂದಿರುವ ಈ ಬೈಕ್, ಹಿಂಬದಿಯಲ್ಲಿ 170ಎಂಎಂ 18ಎಂಎಂ ಚಕ್ರ ಹೊಂದಿದೆ.

ಇಂಜಿನ್‌ಗೆ ರಕ್ಷಣೆ ಕೊಡುವ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ಉತ್ತಮವಾದ ಗ್ರಿಪ್‌/ಕಂಟ್ರೋಲ್‌ಗಳೊಂದಿಗೆ ಬರುವ ಹೊಸ ಟೂತ್ಡ್‌ ಬ್ರೇಕ್ ಪೆಡಲ್‌ಗಳೊಂದಿಗೆ ಮೇಲ್ಮುಖವಾಗಿ ಎಕ್ಸಾಸ್ಟ್‌ ಪೈಪ್ ಹೊಂದಿರುವ ಈ ಬೈಕ್‌ನಲ್ಲಿ ನೀರಿನ ಮೂಲಕವೂ ಸುಲಭವಾಗಿ ಹಾಯ್ದು ಹೋಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...