
ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ.
ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಬಂದು ದಡ ಸೇರಿಸಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.
ನಾಯಿಯ ಮಾಲೀಕರು ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವೇಳೆ ತಮ್ಮ ನಾಯಿ ಮಾಡಿದ ಕೆಲಸಕ್ಕೆ ಅದರ ಬೆನ್ನು ತಟ್ಟಿ ’ಗುಡ್ ಬಾಯ್’ ಎಂದು ಪ್ರೀತಿಯಿಂದ ಕರೆದಿದ್ದಾರೆ.
2000 ರೂ. ಆಸೆಗೆ ಚರಂಡಿ ನೀರು ಕುಡಿದ 60 ವರ್ಷದ ವೃದ್ಧ
ಮೊದಲೇ ನಾಯಿಗಳೆಂದರೆ ಭಾರೀ ಪ್ರೀತಿ ಇರುವ ನೆಟ್ಟಿಗರು ಈ ವಿಡಿಯೋ ನೋಡಿ ಇದ್ದಿದ್ದೂ ಖುಷಿಯಾಗಿದ್ದು, ಈ ಹೀರೋ ಶ್ವಾನವನ್ನು ಮೆಚ್ಚಿ ಕೊಂಡಾಡಿ ಕಾಮೆಂಟ್ ಮಾಡಿದ್ದಾರೆ.