alex Certify ಚಿಪ್ಸ್ ಪ್ಯಾಕೇಟ್‌ ನಿಂದ ಕೂಲಿಂಗ್ ​ಗ್ಲಾಸ್ ತಯಾರಿ​: ಕುತೂಹಲಕಾರಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಸ್ ಪ್ಯಾಕೇಟ್‌ ನಿಂದ ಕೂಲಿಂಗ್ ​ಗ್ಲಾಸ್ ತಯಾರಿ​: ಕುತೂಹಲಕಾರಿ ವಿಡಿಯೋ ವೈರಲ್

ತ್ಯಾಜ್ಯ ವಿಲೇವಾರಿ ಸಮಸ್ಯೆ, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ದೇಶದ ಬಹು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುವವರಿದ್ದಾರೆ, ಇದಾಗಲೇ ಈ ತ್ಯಾಜ್ಯದ ಪ್ರಯೋಜನ ಪಡೆದು ಹಲವಾರು ಸಾಮಗ್ರಿಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಿವೆ.

ಇವುಗಳ ನಡುವೆಯೇ ಪುಣೆಯ ಈ ಪುಟ್ಟ ಕೆಮಿಕಲ್ ಲ್ಯಾಬ್ ಭರವಸೆಯ ಕಿರಣವನ್ನು ಹುಟ್ಟು ಹಾಕಿದೆ. ಪ್ಲಾಸ್ಟಿಕ್​ ತ್ಯಾಜ್ಯಗಳಿಂದ ಸನ್​ಗ್ಲಾಸ್​ ತಯಾರು ಮಾಡಲಾಗುತ್ತಿದೆ. ಆಶಯ ಎಂಬ ಕಂಪೆನಿ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ತಿಂದು ಬಿಟ್ಟ ಚಿಪ್ಸ್​ ಪ್ಯಾಕೇಟ್​ಗಳಿಂದ ಸುಂದರವಾದ ಸನ್​ಗ್ಲಾಸ್​ ತಯಾರು ಮಾಡಲಾಗುತ್ತಿದೆ.

ಕಂಪೆನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಅನೀಶ್ ಮಲ್ಪಾನಿ ಅವರು ಈ ಬಗ್ಗೆ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್​ ತ್ಯಾಜ್ಯದಿಂದ ಸನ್​ಗ್ಲಾಸ್​ ತಯಾರು ಮಾಡುತ್ತಿರುವ ಬಗ್ಗೆ ಅವರು ವಿವರಿಸಿದ್ದಾರೆ.

ಈ ವಿಡಿಯೋದಲ್ಲಿ ಪ್ಲಾಸ್ಟಿಕ್​ನಿಂದ ಸನ್‌ಗ್ಲಾಸ್‌ಗಳನ್ನು ಹಂತ ಹಂತವಾಗಿ ಹೇಗೆ ತಯಾರಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...