alex Certify ಈ ನಾಣ್ಯ ನಿಮ್ಮಲ್ಲಿದ್ದರೆ ಸಿಗುತ್ತೆ ಲಕ್ಷಾಂತರ ರೂಪಾಯಿ, ಅದೃಷ್ಟ ಬದಲಿಸುವ ಕಾಯಿನ್ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಾಣ್ಯ ನಿಮ್ಮಲ್ಲಿದ್ದರೆ ಸಿಗುತ್ತೆ ಲಕ್ಷಾಂತರ ರೂಪಾಯಿ, ಅದೃಷ್ಟ ಬದಲಿಸುವ ಕಾಯಿನ್ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಜೇಬಿನಲ್ಲಿ ಕೆಲವು ನಾಣ್ಯಗಳನ್ನು ಇಟ್ಟುಕೊಂಡು ಕೋಟ್ಯಾಧಿಪತಿ ಆಗಿರುವುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮಲ್ಲಿ ಮಾತಾ ವೈಷ್ಣೋದೇವಿ ಚಿತ್ರವಿರುವ ಹಳೆಯ ನಾಣ್ಯ ಇದ್ದರೆ ಲಕ್ಷಾಂತರ ರೂಪಾಯಿ ಸಿಗಲಿದೆ.

ಮಾತಾ ವೈಷ್ಣೋದೇವಿಯ ಫೋಟೋ ಹೊಂದಿರುವ 5 ಮತ್ತು 10 ರೂಪಾಯಿ ನಾಣ್ಯಗಳನ್ನು ನೀವು ಹೊಂದಿದ್ದಲ್ಲಿ ನಿಮ್ಮ ಕನಸು ನನಸಾಗುತ್ತದೆ. ವರದಿಗಳ ಪ್ರಕಾರ, ಅಂತಹ ಒಂದು ನಾಣ್ಯವನ್ನು ಹೊಂದಿದ್ದರೆ ನಿಮ್ಮ ಅದೃಷ್ಟ ಬದಲಾಗುತ್ತದೆ. ನೀವು ಸುಲಭವಾಗಿ ಲಕ್ಷಾಂತರ ರೂಪಾಯಿ ಗಳಿಸಬಹುದಾಗಿದೆ.

ನಾಣ್ಯಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ

ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ವೈಷ್ಣೋದೇವಿಯ ಚಿತ್ರವಿರುವ ನಾಣ್ಯ ಅದೃಷ್ಟ ತರಲಿದೆ ಎಂದು ಪರಿಗಣಿಸಲಾಗುತ್ತದೆ. ಅನೇಕರು ಅಂತಹ ನಾಣ್ಯಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ತಾಯಿ ಆಶೀರ್ವಾದ ಪಡೆಯುತ್ತಾರೆ. ಇಂತಹ ನಾಣ್ಯ ಇದ್ದರೆ ನೀವು ಯಾವಾಗಲೂ ಹಣ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಇದಲ್ಲದೆ ನಾಣ್ಯಗಳೊಂದಿಗೆ ಸಂಬಂಧಿಸಿದ ಹಲವಾರು ನಂಬಿಕೆಗಳು ಬೆಳೆದುಬಂದಿವೆ. 5, 10 ರೂಪಾಯಿ ನಾಣ್ಯಗಳನ್ನು ಕೇಳುವ ಬೆಲೆಗೆ ಹರಾಜು ಹಾಕುತ್ತಾರೆ. ಅಂದ ಹಾಗೇ, ಈ ಎರಡೂ ನಾಣ್ಯಗಳನ್ನು ಸರ್ಕಾರ 2002 ರಲ್ಲಿ ಬಿಡುಗಡೆ ಮಾಡಿತು.

ಎಲ್ಲಿ ಸಿಗುತ್ತೆ 10 ಲಕ್ಷ ರೂ.?

ಈ ನಾಣ್ಯಗಳ ಸಹಾಯದಿಂದ ಲಕ್ಷಾಂತರ ಹೇಗೆ ಪಡೆಯುವುದು ಎಂಬ ಯೋಚನೆ ನಿಮಗಿದ್ದರೆ ಅದರ ಮಾಹಿತಿ ಇಲ್ಲಿದೆ. Indiamart.com ನಲ್ಲಿ ಈ ನಾಣ್ಯಗಳಿಗಾಗಿ ಹಲವಾರು ಬಿಡ್‌ಗಳನ್ನು ಆಹ್ವಾನಿಸಲಾಗುತ್ತಿದೆ. ಒಮ್ಮೆ ನೀವು ಸೈಟ್‌ಗೆ ಹೋದರೆ, ನಿಮ್ಮನ್ನು ಮಾರಾಟಗಾರರಾಗಿ ನೋಂದಾಯಿಸಲು ನಿಮ್ಮನ್ನು ಕೇಳಲಾಗುತ್ತದೆ. ನಂತರ ಮುಂದಿನ ಹಂತದಲ್ಲಿ ನೀವು ವೆಬ್‌ಸೈಟ್‌ನಲ್ಲಿ ಎರಡೂ ಕಡೆಯಿಂದ ನಾಣ್ಯದ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ನಂತರ ಜನರು ನಾಣ್ಯಗಳ ಮೇಲೆ ಬಿಡ್ ಮಾಡುತ್ತಾರೆ. ಯಾರು ಹೆಚ್ಚು ಹಣವನ್ನು ನೀಡುತ್ತಾರೆಯೋ ನಾಣ್ಯವನ್ನು ಅವರಿಗೆ ಮಾರಾಟ ಮಾಡಬಹುದಾಗಿದೆ.

ಈ ನಡುವೆ, ನೀವು ಬ್ರಿಟಿಷ್ ಕಾಲದ ನೋಟ್ ಗಳನ್ನು ಹೊಂದಿದ್ದರೆ, ಅದರಿಂದಲೂ ಹೆಚ್ಚಿನ ಹಣವನ್ನು ಸಹ ಪಡೆಯಬಹುದು. ಆ ಸಮಯದಲ್ಲಿ ಅಶೋಕ ಚಕ್ರವನ್ನು ನೋಟ್ ಗಳಲ್ಲಿ ಮುದ್ರಿಸಲಾಗುತ್ತಿತ್ತು. ಈಗ ಈ ನೋಟ್ ವಿರಳವಾಗಿ ಕಂಡುಬರುತ್ತದೆ. ಆದರೆ, ನಿಮ್ಮ ಬಳಿ ಈ ವಿಶೇಷ ನೋಟ್ ಇದ್ದರೆ ನಿಮ್ಮ ಅದೃಷ್ಟ ಬದಲಾಗಬಹುದು. ಒಂದು ನೋಟ್ ಬದಲಾಗಿ ನೀವು 20-25 ಸಾವಿರ ರೂ. ಗಳಿಸಬಹುದು. ನೀವು ಮನೆಯಲ್ಲಿಯೇ ಕುಳಿತು ಈ ನೋಟ್ ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...