alex Certify ಗೊರಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊರಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ….!

ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿದ್ರೆಯ ಸಮಯದಲ್ಲಿ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ ಮೂಗಿನಿಂದ ಸರಿಯಾದ ಆಮ್ಲಜನಕ ಪ್ರಸಾರದ ಕೊರತೆಯಿಂದ ಗೊರಕೆ ಉಂಟಾಗುತ್ತದೆ. ಇದು ಸುತ್ತಮುತ್ತಲಿನ ಅಂಗಾಂಶಗಳನ್ನು ಕಂಪಿಸುವಂತೆ ಮಾಡಿ ಗೊರಕೆಯ ಶಬ್ದವನ್ನು ಉಂಟು ಮಾಡುತ್ತದೆ.

ನಾವು ತಿನ್ನುವ ಆಹಾರ ಹಾಗೂ ಅಭ್ಯಾಸಗಳು ಇದರ ಮೇಲೆ ಗಾಢ ಪರಿಣಾಮ ಬೀರುತ್ತದೆ.

ಸೋಯಾ ಹಾಲು

ಹಸುವಿನ ಹಾಲಿಗಿಂತ ಸೋಯಾ ಹಾಲನ್ನು ಕುಡಿಯಬೇಕು. ಸೋಯಾ ಹಾಲು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೇನು ತುಪ್ಪ

ಜೇನುತುಪ್ಪ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಮತ್ತು ಗೊರಕೆಯನ್ನು ನಿಲ್ಲಿಸುವ ಗುಣವನ್ನು ಹೊಂದಿದ್ದು, ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಮೀನು

ಮಾಂಸದ ಸೇವನೆ ಕೊಬ್ಬು ಹೆಚ್ಚಾಗುವಂತೆ ಮಾಡುತ್ತದೆ. ಆದ್ದರಿಂದ ಮಾಂಸ ಸೇವನೆಯನ್ನು ಬಿಟ್ಟು ಮೀನಿನ ಸೇವನೆ ಮಾಡುವುದರಿಂದ ಗೊರಕೆ ಕಡಿಮೆಯಾಗುವುದಲ್ಲದೆ ಆರೋಗ್ಯ ಸುಧಾರಿಸುತ್ತದೆ.

ಚಹಾ

ಚಹಾ ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗೊರಕೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ದೈನಂದಿನ ಆಹಾರ ಕ್ರಮದಲ್ಲಿ ಚಹಾವನ್ನು ಸೇವಿಸಬೇಕು.

ಈರುಳ್ಳಿ

ಈರುಳ್ಳಿ ಸುಲಭವಾಗಿ ಉಸಿರಾಡಲು ಸಹಾಯ ಮಾಡುವುದಲ್ಲದೆ ಗೊರಕೆ ಸಮಸ್ಯೆಗೆ ರಾಮಬಾಣ.

ಗೊರಕೆ ಸಮಸ್ಯೆಯನ್ನು ತಡೆಯಲು ಈ ಅಭ್ಯಾಸಗಳ ಬಗ್ಗೆ ಗಮನ ಕೊಡಲೇಬೇಕು

ಮಲಗುವ ಮೊದಲು ವೈನ್ ಅಥವಾ ಆಲ್ಕೋಹಾಲ್ ಯುಕ್ತ ಪಾನೀಯವನ್ನು ಸೇವಿಸಿದರೆ ಗೊರಕೆ ಹೆಚ್ಚುತ್ತದೆ.

ಧೂಮಪಾನ ಮಾಡಿದರೆ ಗಂಟಲು ಮತ್ತು ಮೂಗು ಕಟ್ಟಿಕೊಂಡು ಉಸಿರಾಟ ತೊಂದರೆಗೆ ಕಾರಣವಾಗುತ್ತದೆ.

ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯ ಜೊತೆಗೆ ಕಿರಿಕಿರಿ ಕೊಡುವ ಗೊರಕೆ ಸಮಸ್ಯೆ ದೂರವಾಗುತ್ತದೆ.

ನೀರನ್ನು ಚೆನ್ನಾಗಿ ಕುಡಿದರೆ, ಅದರಲ್ಲಿರುವ ಗುಣ, ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...