alex Certify ಇಲ್ಲಿದೆ ಕಣ್ಣುಗಳ ಉರಿ ನಿವಾರಣೆಗೆ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕಣ್ಣುಗಳ ಉರಿ ನಿವಾರಣೆಗೆ ʼಮನೆ ಮದ್ದುʼ

ಕೆಲವೊಮ್ಮೆ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು.

ಕಣ್ಣಿನ ಉರಿ ಸಮಸ್ಯೆಯಿಂದ ಹೊರಬರಲು ಈ ಮನೆ ಮದ್ದುಗಳನ್ನು ಉಪಯೋಗಿಸಿ.

* ಕೊತ್ತಂಬರಿ ಬೀಜದಿಂದ ಕಷಾಯ ಮಾಡಿ. ಅದರಲ್ಲಿ ಹತ್ತಿಯನ್ನು ನೆನೆಸಿ, ಆ ಹತ್ತಿಯನ್ನು ಕಣ್ಣುಗಳ ಮೇಲೆ ಇಟ್ಟರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

* ಗರಿಕೆಯನ್ನು ಪೇಸ್ಟ್‌ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಲೇಪ ಮಾಡಿ 1 ಗಂಟೆ ಬಿಟ್ಟು ತೊಳೆದರೆ ಕಣ್ಣು ಉರಿ ನಿವಾರಣೆಯಾಗುತ್ತದೆ.

* ನುಗ್ಗೆ ಸೊಪ್ಪನ್ನು ಅರೆದು ಸೋಸಿ ಆ ರಸವನ್ನು ಕಣ್ಣಿನ ರೆಪ್ಪೆ ಮೇಲೆ ಹಚ್ಚಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

* ಬೆಟ್ಟದ ನೆಲ್ಲಿಕಾಯಿ ಪುಡಿಗೆ ತುಪ್ಪ ಮತ್ತು ಬೆಚ್ಚಗಿನ ನೀರು ಸೇರಿಸಿ ಪ್ರತಿದಿನ ರಾತ್ರಿ ಕುಡಿದರೆ ಕಣ್ಣುಗಳ ಉರಿ ಶಮನವಾಗುತ್ತದೆ.

* ನಿಯಮಿತವಾಗಿ ಸೊಗದೆ ಬೇರಿನ ಶರಬತ್ತನ್ನು ಸೇವಿಸಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

* ಹೆಸರು ಕಾಳಿನ ಪುಡಿಯನ್ನು ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

* ಕಣ್ಣು ಉರಿ ಇದ್ದಾಗ ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಹಾಕಿ ಕಲಸಿ ಅದನ್ನು ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲೆ ಇಡಬೇಕು.

* ಸೀಬೆ ಮರದ ಹೂಗಳನ್ನು ದಾಳಿಂಬೆ ಚಿಗುರಿನ ಜೊತೆ ಕಷಾಯ ಮಾಡಿ ಆ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಉರಿ ನಿವಾರಣೆಯಾಗುತ್ತದೆ.

* ಶ್ರೀಗಂಧವನ್ನು ರೋಸ್‌ವಾಟರ್‌ನಲ್ಲಿ ಕಲಸಿ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...