alex Certify ಪುಸ್ತಕ ಓದುವಾಗ ಕಾಡುವ ನಿದ್ದೆಯನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಸ್ತಕ ಓದುವಾಗ ಕಾಡುವ ನಿದ್ದೆಯನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌…!

ಮಕ್ಕಳಿಗೆ ಓದುವುದು ಅಂದ್ರೆ ಬಹಳ ಬೇಸರದ ಸಂಗತಿ. ಹೋಮ್‌ವರ್ಕ್‌ ಮಾಡಲು ಪುಸ್ತಕ ತೆಗೆದ ತಕ್ಷಣ ನಿದ್ರೆ ಬರಲಾರಂಭಿಸುತ್ತದೆ. ಪುಸ್ತಕ ಓದಲು ಹೊರಟಾಗ ನಿದ್ದೆ ಬರುವ ಸಮಸ್ಯೆ ಕೇವಲ ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇದೆ. ಎಷ್ಟೋ ಬಾರಿ ಓದಬೇಕೆಂದು ಬಯಸಿದರೂ ಓದಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿದುಕೊಂಡರೆ ಪರಿಹಾರವನ್ನೂ ಹುಡುಕಬಹುದು.

ಪುಸ್ತಕ ತೆರೆದ ತಕ್ಷಣ ನಿದ್ರೆ ಬರುವುದೇಕೆ ?

ವಾಸ್ತವವಾಗಿ ಅಧ್ಯಯನ ಮಾಡುವಾಗ ಕಣ್ಣುಗಳಿಗೆ ಸಂಬಂಧಿಸಿದ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಮೆದುಳು ನಾವು ಓದಿದ ವಿಷಯಗಳನ್ನು ಸಂಗ್ರಹಿಸುತ್ತದೆ ಮತ್ತು ನೆನಪಿಸಿಕೊಳ್ಳುತ್ತದೆ. ಕಣ್ಣಿನ ಸ್ನಾಯುಗಳು ಆಯಾಸಗೊಂಡಾಗ ಅಥವಾ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ, ನಿದ್ರೆ ಬರಲಾರಂಭಿಸುತ್ತದೆ.

ಅನೇಕ ಬಾರಿ ನಾವು ಓದಲು ಕುಳಿತಿರುವ ಭಂಗಿ ತಪ್ಪಾಗಿದ್ದು, ಅದರಿಂದಲೂ ನಿದ್ದೆ ಬರಬಹುದು. ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗಲೂ ಅದೇ ರೀತಿ ನಮಗೆ ನಿದ್ದೆ ಬರುತ್ತದೆ. ಅಧ್ಯಯನ ಮಾಡುವಾಗ ಆರಾಮಾಗಿ ಕೂರಬಾರದು, ತುಂಬಾ ಸೋಮಾರಿತನವನ್ನು ಅನುಭವಿಸದ ರೀತಿಯಲ್ಲಿ ದೇಹದ ಭಂಗಿಯನ್ನು ಇಟ್ಟುಕೊಳ್ಳಬೇಕು.

ಓದುತ್ತಿರುವಾಗ ನಿದ್ದೆ ಬಂದರೆ ಏನು ಮಾಡಬೇಕು ?

ಕತ್ತಲೆಯಲ್ಲಿ ಅಧ್ಯಯನ ಮಾಡಬೇಡಿಓದಲು ಕುಳಿತಾಗಲೆಲ್ಲ  ಸಾಕಷ್ಟು ಬೆಳಕು ಇರುವ ಸ್ಥಳವನ್ನು ಆರಿಸಿ. ಇದು ಕಣ್ಣುಗಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಬೆಳಕು ಕಡಿಮೆ ಇರುವ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಬೇಗನೆ ನಮಗೆ ನಿದ್ದೆ ಬರಲಾರಂಭಿಸುತ್ತದೆ.

ತೆರೆದ ಜಾಗದಲ್ಲಿ ಮಾತ್ರ ಓದಿಟೆರೇಸ್ ಅಥವಾ ಬಾಲ್ಕನಿಯಂತಹ ತೆರೆದ ಸ್ಥಳಗಳಲ್ಲಿ ಗಾಳಿ ಮತ್ತು ಬೆಳಕು ಚೆನ್ನಾಗಿ ಬರುತ್ತದೆ. ಆದ್ದರಿಂದ ಅಂತಹ ಸ್ಥಳಗಳಲ್ಲಿ ಅಧ್ಯಯನ ಮಾಡಬೇಕು. ಇದು ಆಲಸ್ಯದ ಭಾವನೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯನ್ನು ತಡೆಯುತ್ತದೆ. ಇದರಿಂದ ಕಣ್ಣುಗಳಿಗೂ ಅನುಕೂಲವಾಗುತ್ತದೆ.

ಹಾಸಿಗೆಯಲ್ಲಿ ಓದಬೇಡಿಕೆಲವರು ಹಾಸಿಗೆಯ ಮೇಲೆ ಕುಳಿತು ಓದುತ್ತಾರೆ. ಹೀಗೆ ಮಾಡುವುದರಿಂದ ಸೋಮಾರಿತನ ಮತ್ತು ತೂಕಡಿಕೆ ಉಂಟಾಗುತ್ತದೆ. ಅಧ್ಯಯನ ಮಾಡುವಾಗ ಟೇಬಲ್ ಮತ್ತು ಕುರ್ಚಿಯನ್ನು ಆಯ್ದುಕೊಳ್ಳಿ. ಇದು ನಿದ್ರೆಯನ್ನು ದೂರ ಮಾಡುತ್ತದೆ.

ಓದುವ ಮೊದಲು ತೆಗೆದುಕೊಳ್ಳಿ ಲಘು ಆಹಾರ ಅತಿಯಾಗಿ ತಿಂದ ನಂತರ ಆಲಸ್ಯ ಮತ್ತು ನಿದ್ದೆ ಬರುವುದು ಸಹಜ. ಹಾಗಾಗಿ ಆಹಾರವನ್ನು ಸೇವಿಸಿದ ತಕ್ಷಣವೇ ಓದಲು ಕುಳಿತುಕೊಳ್ಳಬೇಡಿ. ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಇದರಿಂದ ಹೆಚ್ಚು ಸೋಮಾರಿತನ ನಮ್ಮನ್ನು ಕಾಡುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...